alex Certify ಕೊರೊನಾ ಸಂಕಟದ ಮಧ್ಯೆಯೂ ರಜಾ- ಮಜಾದಲ್ಲಿ ಚೀನಿಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಟದ ಮಧ್ಯೆಯೂ ರಜಾ- ಮಜಾದಲ್ಲಿ ಚೀನಿಯರು..!

 जानलेवा कोरोनावायरस (Corona virus) की उत्पत्ति चीन (China) में हुई है लेकिन यहां के लोगों को अब इसका कोई डर नहीं रहा है. क्योंकि विशाल जनसंख्या वाले इस देश की कुछ चौंकाने वाली तस्वीरें सामने आई हैं जो स्वास्थ्य के लिहाज से बेहद खतरनाक साबित हो सकती है.

ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ.

ಚೀನಾ ರಾಷ್ಟ್ರೀಯ ದಿನದ ಹಿನ್ನಲೆಯಲ್ಲಿ ಅಕ್ಟೋಬರ್ 1 ರಿಂದ 8 ರ ವರೆಗೆ ರಜೆಯಿದೆ. ಈ ಸಂದರ್ಭದಲ್ಲಿ ಚೀನಿ ಪ್ರವಾಸಿಗರು ಕೊರೊನಾ ಮರೆತು ಮಜ ಮಾಡ್ತಿದ್ದಾರೆ. ಈ ವೇಳೆ ಕೊರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಇವರು ಉಲ್ಲಂಘಿಸುತ್ತಿದ್ದಾರೆ.

ಕೊರೊನಾ ವೈರಸ್ ನಂತ್ರ ಇದೇ ಮೊದಲ ಬಾರಿ ಸಾರ್ವಜನಿಕ ರಜೆ ನೀಡಲಾಗಿದೆ. ಈ ಸಂದರ್ಭದಲ್ಲಿ ಜನರು ಎಲ್ಲವನ್ನೂ ಮರೆತಿದ್ದಾರೆ. ಚೀನಾದ ಪ್ರಸಿದ್ಧ ಪ್ರವಾಸಿತಾಣ ಹಾಂಗ್‌ಶಾನ್ ಪರ್ವತಕ್ಕೆ ಜನರ ದಂಡೆ ಹರಿದು ಬಂದಿದೆ. ಮಾಸ್ಕ್, ಸಾಮಾಜಿಕ ಅಂತರ ಮರೆತು ಜನರು ಎಂಜಾಯ್ ಮಾಡಿದ್ದಾರೆ. ಚೀನಾದ ರಾಷ್ಟ್ರೀಯ ರಜಾದಿನವನ್ನು ಗೋಲ್ಡನ್ ವೀಕ್ ಎಂದೂ ಕರೆಯಲಾಗುತ್ತದೆ. ಇದು ಅಕ್ಟೋಬರ್ 1 ರಿಂದ ಅಕ್ಟೋಬರ್ 8 ರವರೆಗೆ ನಡೆಯುತ್ತದೆ. ಇದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಸ್ಥಾಪಿಸಿದ ಸಂದರ್ಭದಲ್ಲಿ 1949 ರಲ್ಲಿ ಪ್ರಾರಂಭವಾಯಿತು. ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.

ಗ್ರೇಟ್ ವಾಲ್ ಮತ್ತು ಡಿಸ್ನಿಲ್ಯಾಂಡ್ನಲ್ಲಿ ಕೂಡ ಪ್ರವಾಸಿಗರು ದಂಡು-ದಂಡಾಗಿ ಬರ್ತಿದ್ದಾರೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳು ಚೀನಿ ಪ್ರವಾಸಿಗರಿಂದ ತುಂಬಿದೆ. ರಜೆಯ ಕೊನೆ ದಿನ ಇದ್ರ ಸಂಖ್ಯೆ ಹೆಚ್ಚಾಗಿದ್ದು, ವಿಶೇಷ ರೈಲುಗಳನ್ನು ಬಿಡಲು ಚೀನಾ ಸರ್ಕಾರ ಮುಂದಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...