ಪ್ರಯಾಣಿಕರೊಬ್ಬರ ಬ್ಯಾಗ್‌ನೊಳಗಿದ್ದ ಐಟಂನ ಚಿತ್ರ ತೆಗೆದು ಸೋರಿಕೆ ಮಾಡಿದ ಕಾರಣಕ್ಕೆ ಚೀನೀ ಸಬ್‌ವೇ ಗಾರ್ಡ್ ಕೆಲಸದಿಂದ ವಜಾಗೊಂಡಿದ್ದಾನೆ.
ಆತ ವಜಾಗೊಳ್ಳುವಂತಹ ತಪ್ಪೇನಪ್ಪ ಮಾಡಿದ್ದು ಎಂದರೆ, ಮಹಿಳಾ ಪ್ರಯಾಣಿಕರ ಬ್ಯಾಗ್ ಒಳಗೆ ಲೈಂಗಿಕ ಆಟಿಕೆಗಳಿರುವುದನ್ನು ಸ್ಕ್ಯಾನ್ ನಲ್ಲಿ ಕಂಡು ಅದರ ಚಿತ್ರಸೆರೆ ಹಿಡಿದು ತನ್ನ ಗೆಳೆಯರೊಂದಿಗೆ ಹಂಚಿಕೊಂಡಿದ್ದ. ಬಳಿಕ ಅದು ಗುಂಪು ಚಾಟ್‌ನಲ್ಲಿಯೂ ಹರಿದಾಡಿತು.
ʼಇಂಜೆಕ್ಷನ್ʼ ಎಂದರೆ ಭಯವೆಂದ ಬಿಗ್ಬಾಸ್ ಸ್ಪರ್ಧಿ ಕಾಲೆಳೆದ ನೆಟ್ಟಿಗರು..!
ಗಾರ್ಡ್‌ನ ನಡವಳಿಕೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡ ಒಬ್ಬ ಬ್ಲಾಗರ್ ಪೊಲೀಸರಿಗೆ ದೂರು ನೀಡಿದ್ದ. ಸಾಮಾಜಿಕ ಜಾಲತಾಣದಲ್ಲೂ ಗಾರ್ಡ್‌ನ ನಡವಳಿಕೆ ಹೊರಗೆ ಹಾಕಿದ.
ಬ್ಲಾಗರ್‌ನ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ತಾನು ಫೋಟೋಗಳನ್ನು ಸ್ನೇಹಿತರೊಡನೆ ಹಂಚಿಕೊಂಡಿದ್ದಾಗಿ ಗಾರ್ಡ್ ಕ್ಷಮೆಯಾಚಿಸಿದ. ಆದರೆ ಗಂಭೀರ ಪ್ರಕರಣವೆಂದು ಆತನನ್ನು ಕೆಲಸದಿಂದ ತೆಗೆದುಹಾಕಲಾಯಿತು.