ಮುಖದ ಮೇಲಿನ ಮೊಡವೆಯನ್ನು ಚಿವುಟಲು ಹೋದ ಚೀನಾದ ವ್ಯಕ್ತಿಯೊಬ್ಬ ಸಾವನ್ನು ತೀರಾ ಸನಿಹದಲ್ಲೇ ಕಂಡು ಬದುಕಿ ಬಂದಿದ್ದಾನೆ.
ಬಾಯಿಯಲ್ಲಿ ಗಂಭೀರವಾದ ಗಾಯಗಳನ್ನು ಮಾಡಿಕೊಂಡಿದ್ದ ಈ ವ್ಯಕ್ತಿ ತನ್ನ ತುಟಿಗಳ ಕೆಳಗೆ ಇದ್ದ ಪಿಂಪಲ್ ಅನ್ನು ಚಿವುಟಲು ಹೋಗಿ ಆ ಇನ್‌ಫೆಕ್ಷನ್ ಅನ್ನು ತನ್ನ ಶ್ವಾಸಕೋಶಕ್ಕೇ ಎಳೆದುಕೊಂಡಿದ್ದಾನೆ.
ಪೂರ್ವ ಚೀನಾದ ಜಿಂಯಾಂಗ್ಸು ಪ್ರಾಂತ್ಯದ ಚೆನ್ ಹೆಸರಿನ ಈ ವ್ಯಕ್ತಿ ನ್ಯೂಮೋನಿಯಾದಿಂದಾಗಿ ತನ್ನೆರಡೂ ಶ್ವಾಸಕೋಶಗಳಿಗೆ ಹಾನಿ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಐಸಿಯುಗೆ ದಾಖಲು ಮಾಡಲಾಗಿತ್ತು.
ಬಾಯಿಗೆ ಆಗಿದ್ದ ಇನ್‌ಫೆಕ್ಷನ್ ಕಾರಣದಿಂದ ಈತನ ಶ್ವಾಸಕೋಶಗಳಿಗೆ ಹಾನಿ ಮಾಡಿತ್ತು ಎಂದಿದ್ದು ಚೆನ್ ಚಿವುಟಿದ ಮೊಡವೆಯು ಸಾವಿನ ತ್ರಿಕೋನದ ಜಾಗದಲ್ಲಿ ಇದ್ದು ಬಹಳ ಅಪಾಯಕಾರಿ ಎಂದು ಆತನಿಗೆ ಶುಶ್ರೂಷೆ ಮಾಡಿದ ವೈದ್ಯರಾದ ಡಾ. ಝು ತಿಳಿಸಿದ್ದಾರೆ. ಆ ಭಾಗದಲ್ಲಿ ಚರ್ಮವನ್ನು ಕೀಳುವುದರಿಂದ ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.