ಕೋಟ್ಯಂತರ ಭಾರತೀಯರನ್ನು ಗುರಿಯಾಗಿಸಿಕೊಂಡಿರುವ ಚೀನೀ ಹ್ಯಾಕರ್‌ಗಳು ಅಕ್ಟೋಬರ್-ನವೆಂಬರ್‌ನಲ್ಲಿ ನಡೆದ ಹಬ್ಬದ ಮಾಸದ ವಿಶೇಷ ಶಾಪಿಂಗ್ ಫೆಸ್ಟ್‌ಗಳ ವೇಳೆ ಸೈಬರ್ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆನ್ಲೈನ್ ಶಾಪಿಂಗ್ ಸೀಸನ್ ವೇಳೆ ಖರೀದಿಯ ಭರದಲ್ಲಿರುವ ಭಾರತೀಯರನ್ನು ಚೀನಾದ ಗುವಾಂಗ್‌ಡಾಂಗ್ ಹಾಗೂ ಹೆನಾನ್ ಪ್ರಾಂತ್ಯದ ಹ್ಯಾಕರ್‌ಗಳು ಗುರಿಯಾಗಿಸಿದ್ದಾರೆ ಎಂದು ಸೈಬರ್ ಭದ್ರತೆಯ ತಜ್ಞ ಸೈಬರ್‌ಸ್ಪೇಸ್ ಪ್ರತಿಷ್ಠಾನ ತಿಳಿಸಿದೆ.
ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್‌ಗಳ ನಕಲಿ ಯುಆರ್‌ಎಲ್‌ಗಳನ್ನು ಸೃಷ್ಟಿಸಿರುವ ಈ ಹ್ಯಾಕರ್‌ಗಳು, ಬೋಗಸ್ ಉಡುಗೊರೆಗಳ ಆಸೆ ಹುಟ್ಟಿಸಿ, ಗ್ರಾಹಕರನ್ನು ಖೆಡ್ಡಾಗೆ ಬೀಳಿಸಲು ಯತ್ನಿಸಿದ್ದಾರೆ. ಈ ನಕಲಿ ಯುಆರ್‌ಎಲ್ ಲಿಂಕ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲಾಗಿದೆ. ಇ-ಕಾಮರ್ಸ್ ದಿಗ್ಗಜರ ಸೇಲ್ಸ್ ಅಭಿಯಾನವನ್ನೇ ನಕಲಿಯಾಗಿಸಿಕೊಂಡು ಹ್ಯಾಕರ್‌ಗಳು ಮಿಲಿಯನ್‌ಗಟ್ಟಲೇ ಭಾರತೀಯರಿಗೆ ವಂಚಿಸಲು ಮುಂದಾಗಿದ್ದರು ಎನ್ನಲಾಗಿದೆ. ಭಾರತದಲ್ಲಿ ಸದ್ಯ 10 ಕೋಟಿಯಷ್ಟು ಆನ್ಲೈನ್ ಶಾಪರ್‌ಗಳಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಲಿದೆ.