ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ಈ ಮಧ್ಯೆ ಚೀನಾದ ಔಷಧೀಯ ಕಂಪನಿಯೊಂದು 2021 ರ ವೇಳೆಗೆ ಕೊರೊನಾ ವೈರಸ್ ಲಸಿಕೆ ಯುಎಸ್ ಸೇರಿದಂತೆ ವಿಶ್ವದಾದ್ಯಂತ ವಿತರಣೆಗೆ ಸಿದ್ಧವಾಗಲಿದೆ ಎಂದಿದೆ.
ಸಿನೋವಾಕ್‌ನ ಸಿಇಒ ಯಿನ್ ವೀಡಾಂಗ್, ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊರೊನಾವಾಕ್ ಮಾರಾಟ ಮಾಡಲು ಯುಎಸ್ ಆಹಾರ ಮತ್ತು ಔಷಧ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಮಾನವರಲ್ಲಿ ಲಸಿಕೆ ಪರೀಕ್ಷೆಯ ಮೂರನೇ ಮತ್ತು ಅಂತಿಮ ಹಂತದಲ್ಲಿದೆ. ಪ್ರಾಯೋಗಿಕ ಲಸಿಕೆಯನ್ನು ಸ್ವತಃ ವೈಯಕ್ತಿಕವಾಗಿ ತೆಗೆದುಕೊಂಡಿದ್ದೇನೆ ಎಂದು ಯಿನ್ ಹೇಳಿದ್ದಾರೆ.
ಆರಂಭದಲ್ಲಿ ಚೀನಾ ಮತ್ತು ವುಹಾನ್ ಗಾಗಿ ಲಸಿಕೆ ತಯಾರಿಸುವುದು ನಮ್ಮ ಆಲೋಚನೆಯಾಗಿತ್ತು. ನಂತ್ರ ನಮ್ಮ ಆಲೋಚನೆಯನ್ನು ಬದಲಿಸಿದ್ದೇವೆ. ಈಗ ವಿಶ್ವದಾದ್ಯಂತ ಲಸಿಕೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಯುಎಸ್, ಯುರೋಪ್ ಸೇರಿ ಇತರ ದೇಶಗಳಿಗೆ ಲಸಿಕೆ ನೀಡುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಯುಎಸ್, ಯುರೋಪಿಯನ್ ಯೂನಿಯನ್, ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲಿ ಕಟ್ಟುನಿಟ್ಟಾದ ನಿಯಮ ಜಾರಿಗೆ ತರಲಾಗಿದೆ. ಚೀನಾದ ಲಸಿಕೆಗಳ ಮಾರಾಟವನ್ನು ಈ ದೇಶಗಳಲ್ಲಿ ನಿಲ್ಲಿಸಲಾಗಿದೆ. ಆದರೆ ಈ ನಿಯಮಗಳನ್ನು ಬದಲಾಯಿಸುವ ಮೂಲಕ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.