ಚೀನಾ ತಾನು ಅಭಿವೃದ್ಧಿ ಹೊಂದಬೇಕು ಅಂದರೆ ಯಾರಿಗೆ ಯಾವ ತೊಂದರೆ ಕೊಡೋಕೆ ಬೇಕಿದ್ರೂ ರೆಡಿಯಾಗಿಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಚೀನಾದ ರಿಯಲ್ ಎಸ್ಟೇಟ್ ಕಂಪನಿಯೊಂದು ಆಸ್ಟ್ರೇಲಿಯಾದ ದ್ವೀಪವೊಂದನ್ನ 99 ವರ್ಷಗಳ ಕಾಲ ಗುತ್ತಿಗೆ ಪಡೆದಿದೆ. ಗುತ್ತಿಗೆ ಪಡೆದ ಬಳಿಕ ದ್ವೀಪದ ನಿವಾಸಿಗಳಿಗೆ ಜಾಗ ಖಾಲಿ ಮಾಡುವಂತೆ ಸೂಚನೆ ನೀಡಿದೆ.
ಚೀನಾದ ಕಂಪನಿ ನಮ್ಮ ಜಾಗವನ್ನ ಗುತ್ತಿಗೆ ಪಡೆದ ಬಳಿಕ ನಮಗೆ ಮನೆಯೇ ಇಲ್ಲದಂತಾಗಿ ಹೋಗಿದೆ ಅಂತಾ ದ್ವೀಪದ ನಿವಾಸಿಗಳು ಅಳಲು ತೋಡಿಕೊಳ್ತಿದ್ದಾರೆ. ಈ ಚೀನಾ ಕಂಪನಿ ಆಸ್ಟ್ರೇಲಿಯನ್ನರನ್ನ ಇಲ್ಲಿಂದ ಓಡಿಸುತ್ತಿದೆ. ಬಹುಶಃ ಅದು ಚೀನಿಯರಿಗೆ ಮಾತ್ರ ಈ ದ್ವೀಪದಲ್ಲಿ ನೆಲೆಸಲು ಅವಕಾಶ ನೀಡಬಹುದು ಅಂತಾ ದ್ವೀಪದಲ್ಲಿ ವಾಸವಿದ್ದ ಆಸ್ಟ್ರೇಲಿಯನ್ ಮಹಿಳೆ ಹೇಳಿದ್ದಾಳೆ.
ಚೀನಾದ ಈ ಗುತ್ತಿಗೆ ಕಂಪನಿ ದ್ವೀಪದ ನಿವಾಸಿಗಳಿಗೆ ತಮ್ಮ ಮನೆಯನ್ನ ಇತರರಿಗೆ ಬಾಡಿಗೆ ನೀಡೋದಕ್ಕೂ ಅವಕಾಶ ನೀಡುತ್ತಿಲ್ಲವಂತೆ. ಈ ಮೂಲಕ ದ್ವೀಪದ ನಿವಾಸಿಗಳಿಗೆ ಪ್ರವಾಸೋದ್ಯಮ ಲಾಭ ಪಡೆಯೋದಕ್ಕೂ ಚೀನಾ ಗುತ್ತಿಗೆ ಕಂಪನಿ ಬ್ರೇಕ್ ಹಾಕಿದೆ.