ವಾಷಿಂಗ್ಟನ್: ವಿಶ್ವ ಸಂವಹನ ತಂತ್ರಜ್ಞಾನದ ಮೇಲೆ ಚೀನಾ ಪ್ರಾಬಲ್ಯಕ್ಕೆ ಪ್ರಯತ್ನ ನಡೆಸಿದೆ. ಮುಸ್ಲಿಮರ ನಿಗ್ರಹಕ್ಕೆ ಬಲವಂತದ ಗರ್ಭಪಾತ ಮಾಡಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಆರೋಪಿಸಿದ್ದಾರೆ.
ಕಮ್ಯೂನಿಸ್ಟ್ ಪಕ್ಷ ಆಡಳಿತದ ಚೀನಾ ತನ್ನ ಪ್ರಾಬಲ್ಯವನ್ನು ಸಾಧಿಸುವುದಕ್ಕೆ ಪ್ರಯತ್ನ ನಡೆಸಿದೆ ಎಂದು ದೂರಿರುವ ಅವರು, ಚೀನಾದಲ್ಲಿ ಮುಸ್ಲಿಮರ ನಿಗ್ರಹಕ್ಕೆ ಗರ್ಭಪಾತ ಮಾಡಿಸಲಾಗುತ್ತಿದೆ. ಬಲವಂತವಾಗಿ ಗರ್ಭಪಾತ ಮಾಡಿಸುತ್ತಿರುವ ಬಗ್ಗೆ ವರದಿ ಬಂದಿರುವುದು ಕಳವಳಕಾರಿಯಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಇದು ಶತಮಾನದ ಕಪ್ಪುಚುಕ್ಕೆ ಎಂದು ಮೈಕ್ ಪಾಂಪಿಯೋ ಹೇಳಿದ್ದಾರೆ.
ಚೀನಾದ ಕಮ್ಯುನಿಸ್ಟ್ ಪಕ್ಷದ ವಿರುದ್ಧ ಕಿಡಿಕಾರಿದ್ದು, ಹಾಂಕಾಂಗ್ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವನ್ನು ಮಾಡುತ್ತಿರುವ ಚೀನಾ ತೈವಾನ್ ಗೂ ಬೆದರಿಕೆ ಹಾಕುತ್ತಿದೆ ಎಂದು ದೂರಿದ್ದಾರೆ.