ಚೀನಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ತಾಯಿಯಾಗಲು ಬಯಸಿದ್ದ ಮಹಿಳೆಗೆ ಶಾಕಿಂಗ್ ಸುದ್ದಿ ಸಿಕ್ಕಿದೆ.
ಆಕೆ ಮಹಿಳೆಯಲ್ಲ ಪುರುಷ ಎಂಬುದು ಗೊತ್ತಾಗಿದೆ. ವಾಸ್ತವವಾಗಿ ಒಂದು ವರ್ಷದಿಂದ ತಾಯಿಯಾಗಲು ಮಹಿಳೆ ಪ್ರಯತ್ನಪಡ್ತಿದ್ದಳಂತೆ. ಆದರೆ ಯಶಸ್ವಿಯಾಗಿರಲಿಲ್ಲ. ಇತ್ತೀಚೆಗೆ ಕಾಲಿನ ಗಾಯ ತೋರಿಸಲು ಆಸ್ಪತ್ರೆಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಮಹಿಳೆಯಲ್ಲ, ಪುರುಷ ಎಂಬುದು ಗೊತ್ತಾಗಿದೆ. ಪುರುಷ ವೈ ಕ್ರೋಮೋಸೋಮ್ ಇದೆ ಎಂದು ವೈದ್ಯರು ಮಹಿಳೆಗೆ ತಿಳಿಸಿದ್ದಾರೆ. ಇದನ್ನು ಕೇಳಿ ಮಹಿಳೆ ದಂಗಾಗಿದ್ದಾಳೆ.
ಮಹಿಳೆಗೆ ಈ ವಿಷ್ಯ ತಿಳಿದಿರಲಿಲ್ಲ. ಎಕ್ಸ್ ರೇ ವೇಳೆ ಅಪರೂಪದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. ಇದೇ ಕಾರಣಕ್ಕೆ ಆಕೆಗೆ ಮುಟ್ಟಾಗಿರಲಿಲ್ಲ. ಹಾಗೆ ಗರ್ಭ ಧರಿಸಲು ಸಾಧ್ಯವಾಗಲಿಲ್ಲವೆಂದು ವೈದ್ಯರು ಹೇಳಿದ್ದಾರೆ. ಸದ್ಯ ಮಹಿಳೆ ಆಘಾತಕ್ಕೊಳಗಾಗಿದ್ದಾಳೆ. ಮಹಿಳೆಗೆ ಗರ್ಭಾಶಯ ಹಾಗೂ ಅಂಡಾಶಯ ಎರಡೂ ಇಲ್ಲ. ಹಾಗೆ ಪುರುಷರ ಜನನಾಂಗವನ್ನು ಮಹಿಳೆ ಹೊಂದಿಲ್ಲ. ಶಸ್ತ್ರಚಿಕಿತ್ಸೆ ಅಥವಾ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮೂಲಕ ಸಮಸ್ಯೆ ಪರಿಹರಿಸಬಹುದಂತೆ. ಆದ್ರೆ ಮಹಿಳೆ ಈ ಬಗ್ಗೆ ಯಾವುದೇ ಸೂಕ್ತ ನಿರ್ಧಾರ ಕೈಗೊಂಡಿಲ್ಲ.