ಲಂಡನ್‌ನಲ್ಲಿರುವ ಚೀನಾ ರಾಯಭಾರಿಯ ಟ್ವಿಟ್ಟರ್ ಖಾತೆಯಿಂದ ಪೋರ್ನ್ ವಿಡಿಯೋ ಸೈಟ್ ಲೈಕ್ ಮಾಡಿರುವ ವಿಷ್ಯ ಸಾಕಷ್ಟು ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದೆ ಚೀನೀ ರಾಯಭಾರಿ ಲಿಯು ಕ್ಸಿಯಾಮಿಂಗ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಅಶ್ಲೀಲ ವಿಡಿಯೋಕ್ಕೆ ಲೈಕ್ ಮಾಡಲಾಗಿದೆ. ಇದರ ನಂತರ, ಚೀನಾದ ರಾಯಭಾರಿ ಟ್ರೋಲ್ ಆಗಿದ್ದಾರೆ.
ವಿಷ್ಯ ಅತಿರೇಕಕ್ಕೆ ಹೋಗಿದ್ದರಿಂದ ಚೀನಾದ ರಾಯಭಾರಿ ಸ್ಪಷ್ಟೀಕರಣ ನೀಡಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ವಿಡಿಯೋ ಲೈಕ್ ಮಾಡಿದ್ದಾರೆಂದು ಲಿಯು ಹೇಳಿದ್ದಾರೆ. ಈ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಲಂಡನ್‌ನ ಚೀನೀ ರಾಯಭಾರ ಕಚೇರಿ ಸೂಚಿಸಿದೆ.
ಚೀನಾ ರಾಯಭಾರಿ ಕಚೇರಿ ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ. ಜನರು ಈ ವದಂತಿಗಳನ್ನು ನಂಬಬಾರದು ಮತ್ತು ಅದನ್ನು ಪ್ರಚಾರ ಮಾಡಬಾರದು ಎಂದು ರಾಯಭಾರಿ ಕಚೇರಿ ತಿಳಿಸಿದೆ. ಲಿಯು ಸ್ವತಃ ಚೀನೀ ರಾಯಭಾರಿ ಕಚೇರಿ ಮಾಡಿದ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ಕಮ್ಮಾರನಿಗೆ ಸುತ್ತಿಗೆಯ ಮೇಲೆ ಏನು ಭಯ ಎಂದು ಶೀರ್ಷಿಕೆ ಹಾಕಿದ್ದಾರೆ.
ಲಿಯು ಕ್ಸಿಯಾಮಿಂಗ್ ಚೀನಾದ ಅತ್ಯಂತ ಪ್ರಭಾವಶಾಲಿ ರಾಜತಾಂತ್ರಿಕರಲ್ಲಿ ಒಬ್ಬರು. ಲಿಯು ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಟ್ವಿಟ್ಟರ್ ಖಾತೆಯನ್ನು ರಚಿಸಿದ್ದು, 85,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.