ಚಿಂಪಾಂಜಿಗಳು ತಮ್ಮ ಸಮೂಹದಲ್ಲಿ ಇರುವ ವೇಳೆ ಮಾನವರಂತೆಯೇ ಕೈಕುಲುಕುವ ಅಭ್ಯಾಸ ರೂಢಿಸಿಕೊಂಡಿವೆ ಎಂದು 12 ವರ್ಷಗಳ ಮಟ್ಟಿಗೆ ಈ ಪ್ರಾಣಿಗಳ ಮೇಲೆ ಮಾಡಿದ ಅಧ್ಯಯನದ ವರದಿಯೊಂದು ತಿಳಿಸಿದೆ.
ಚಿಂಪಾಂಜಿಗಳು ಮಾನವರೊಂದಿಗೆ ಬಹಳಷ್ಟು ಸಾಮ್ಯತೆ ಹೊಂದಿರುವ ಜೀವಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸಲಕರಣೆಗಳನ್ನು ಬಳಸುವಂಥ ಕ್ಲಿಷ್ಟಕರ ಕೆಲಸಗಳನ್ನು ಮಾಡುವ ಚಿಂಪಾಂಜಿಗಳು ಮಾನವರನ್ನು ಚೆನ್ನಾಗಿ ಅನುಕರಣೆ ಮಾಡುತ್ತವೆ.
ರಾಜ್ಯದಲ್ಲಿ ಕೊರೋನಾ ಇಳಿಮುಖ: ಇಲ್ಲಿದೆ ಜಿಲ್ಲಾವಾರು ಸೋಂಕಿತರು, ಸಾವಿನ ಮಾಹಿತಿ
ಇದೀಗ ಈ ಜೀವಿಗಳ ಮೇಲೆ 12 ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿರುವ ಆಂಟ್ವರ್ಪ್ ವಿವಿಯ ಪ್ರಾಣಿ ತಜ್ಞ ಎಡ್ವಿನ್ ವಾನ್ ಲ್ಯೂವೆನ್, “ಭಿನ್ನ ಗುಂಪುಗಳಲ್ಲಿರುವ ಚಿಂಪಾಜಿಗಳು ಭಿನ್ನವಾದ ರೀತಿಯಲ್ಲಿ ಕೈ ಕುಲುಕುವುದನ್ನು ಕಲಿಯುತ್ತವೆ. ತಮ್ಮ ಗುಂಪುಗಳಲ್ಲಿ ಹೀಗೆ ಸೋಷಿಯಲ್ ಆಗಿರುವುದನ್ನು ಚಿಂಪಾಂಜಿಗಳು ಕಲಿಯುತ್ತವೆ” ಎಂದಿದ್ದಾರೆ.
ಗುಜರಾತ್ ಸಮುದ್ರ ತೀರದಲ್ಲಿ ಬೃಹತ್ ತಿಮಿಂಗಲದ ಮೃತದೇಹ ಪತ್ತೆ
“ಕೈಕುಲುಕುವುದು ಇಬ್ಬರು ವ್ಯಕ್ತಿಗಳು ಎಂಗೇಜ್ ಆಗಿ ಸಂವಹನ ಮಾಡುವ ವೇಳೆ ಸೂಕ್ತವಾಗಿ ಕಾಣುತ್ತವೆ. ಚಿಂಪಾಂಜಿಗಳು ಸಹ ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುತ್ತವೆ. ಮಾನವರಲ್ಲಿ ಇರುವ ವರ್ತನೆಯು ಸಾಂಸ್ಕೃತಿಕವಾಗಿ ಬಂದಿರುವ ಹಾಗೆಯೇ ಚಿಂಪಾಂಜಿಗಳಲ್ಲೂ ಬಂದಿದೆ” ಎಂದು ಲ್ಯೂವೆನ್ ತಿಳಿಸಿದ್ದಾರೆ.