ಕೋವಿಡ್-19 ಕಾಟದಿಂದ ತಪ್ಪಿಸಿಕೊಳ್ಳಲು ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಜಪಾನ್ನ ಟೋಕಿಯೋದ ಗಿಂಜಾ ಏರಿಯಾದಲ್ಲಿರುವ ಬಾರ್ ಒಂದರಲ್ಲಿ ಎಲ್ಲಾ ಆಸನಗಳ ಮೇಲೆ ಮನ್ನೆಕಿನ್ ಗೊಂಬೆಗಳನ್ನು ಕೂರಿಸುವ ಮೂಲಕ, ಒಂದೇ ಮೇಜಿನ ಬಳಿ ಇಬ್ಬರಿಗಿಂತ ಹೆಚ್ಚು ಮಂದಿ ಕೂರದಂತೆ ವ್ಯವಸ್ಥೆ ಮಾಡಲಾಗಿದೆ.
ಇದೇ ವೇಳೆ ಗ್ರಾಹಕರ ಕಿಕ್ ಏರಿಸುವ ದೃಷ್ಟಿಯಿಂದ ಮಾಸ್ಕ್ ಹಾಗೂ ವಿಶೇಷ ಶೀಲ್ಡ್ ಧರಿಸಿದ ಚಿಯರ್ ಲೀಡರ್ ಗಳ ನೃತ್ಯವನ್ನೂ ಸಹ ಏರ್ಪಾಡು ಮಾಡಲಾಗಿದೆ. ಇಗೋ ಇಲ್ಲಿದೆ ನೋಡಿ ಈ ಬಾರ್ನ ಹೊಸ ವ್ಯವಸ್ಥೆಯ ಒಂದು ವಿಡಿಯೋ.