ಪುಟಾಣಿ ಅಣ್ಣ – ತಮ್ಮಂದಿರಾದ ಚಾರ್ಲಿ ಹಾಗೂ ಹ್ಯಾರಿ ನಡುವಿನ ಮುದ್ದಾದ ಸಂಭಾಷಣೆಯೊಂದು 2007ರಲ್ಲಿ ವಿಡಿಯೋ ಆಗಿ ಯೂಟ್ಯೂಬ್‌ನಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಪುಟಾಣಿ ತಮ್ಮನಾದ ಚಾರ್ಲಿ ತನ್ನ ಅಣ್ಣನಿಗೆ ಕಚ್ಚಿದ್ದ ಈ ವಿಡಿಯೋ, ‘Charlie Bit Me’, ಹೆಸರಿನಲ್ಲಿ ಬಿತ್ತರಗೊಂಡು ಯುಟ್ಯೂಬ್‌ನಲ್ಲಿ ಅತ್ಯಂತ ಹೆಚ್ಚು ನೋಡಲ್ಪಟ್ಟ ವಿಡಿಯೋಗಳಲ್ಲಿ ಒಂದಾಗಿಬಿಟ್ಟಿತ್ತು.
ಆ ಸಮಯದಲ್ಲಿ ಹ್ಯಾರಿಗೆ ಮೂರು ವರ್ಷವಾದರೆ ಚಾರ್ಲಿಗೆ ಒಂದು ವರ್ಷ. ಇವರಿಬ್ಬರ ಮುದ್ದಾಟವನ್ನು ಅವರ ಅಪ್ಪ ವಿಡಿಯೋ ಮಾಡಿ ಹಾಕಿ, ಇದಕ್ಕೆ 875 ದಶಲಕ್ಷ ವೀವ್ಸ್ ಸಿಕ್ಕಿದ್ದವು.
ಇದೀಗ 2020ರಲ್ಲಿ ಹ್ಯಾರಿ ಹಾಗೂ ಚಾರ್ಲಿಗೆ ಕ್ರಮವಾಗಿ 17 ಹಾಗೂ 14 ವರ್ಷಗಳು ತುಂಬಿವೆ. ಇದೇ ವೇಳೆ ತಮ್ಮಿಬ್ಬರ ನಡುವೆ 13 ವರ್ಷಗಳ ನಡುವೆ ನಡೆದ ಈ ಘಟನೆಯನ್ನು ರೀಕ್ರಿಯೇಟ್ ಮಾಡಿದ್ದಾರೆ ಅಣ್ಣತಮ್ಮಂದಿರು. ಇದು ಈಗ ಮತ್ತೆ ವೈರಲ್ ಆಗಿದೆ.