ನೋವು ಮರೆತು ಜೀವನ್ಮುಖಿಯಾಗಲು ನೆರವಾಗುವ ಸಣ್ಣ-ಪುಟ್ಟ ವಿಷಯಗಳಲ್ಲಿ ಸಂಗೀತವೂ ಒಂದು.
ಕೋವಿಡ್‌ನ ಎರಡನೇ ಅಲೆಯಿಂದ ಭಾರತ ತತ್ತರಿಸುತ್ತಿರುವ ನಡುವೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ನಿಲ್ಲಲು ಜಗತ್ತಿನ ಅನೇಕ ಭಾಗಗಳ ಜನರು ಮುಂದೆ ಬರುತ್ತಿದ್ದಾರೆ. ಕಳೆದ ವಾರ ಎ.ಆರ್. ರಹಮಾನ್‌ರ ’ಅರ್ಜಿಯಾನ್’ ಹಾಡಿಗೆ ಪಾಕಿಸ್ತಾನಿ ಕಲಾವಿದರು ಕನ್ಸರ್ಟ್ ಒಂದನ್ನು ಮಾಡಿಕೊಟ್ಟರೆ, ಅಮೆರಿಕ-ಚೀನೀ ಸೆಲ್ಲಿಸ್ಟ್ ಯೋ-ಯೋ ಮಾ ಅವರು ಸಹ ಇದೀಗ ಭಾರತದ ಜನತೆಗೆ ಮಿಡಿದಿದ್ದಾರೆ.
ಟ್ವಿಟರ್‌ನಲ್ಲಿರುವ ತಮ್ಮ ಖಾತೆಯಲ್ಲಿ ನಾಲ್ಕು ನಿಮಿಷಗಳ ಈ ವಿಡಿಯೋವನ್ನು ಅಪ್ಡೇಟ್ ಮಾಡಿರುವ ಯೋ-ಯೋ ಮಾ ಅವರು ಬಾಕ್‌ರ ಸೂಟ್‌ನ ಸಾರಾಬಂಡೇ ಒಂದನ್ನು ಪ್ರದರ್ಶಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅವಾಂತರ ಸೃಷ್ಟಿಸಿರುವ ಕೋವಿಡ್ ಕಾರಣದಿಂದಾಗಿ ಜನರ ಮನದಲ್ಲಿರುವ ಆತಂಕ ಹೋಗಲಾಡಿಸಲು ಯೋ-ಯೋ ಮಾ ಅವರು ಈ ಭಾವಪೂರ್ಣ ಹಾಡನ್ನು ರಚಿಸಿದ್ದಾರೆ.
“ಭಾರತಕ್ಕಾಗಿ ಸೋಲೋ ಸೆಲ್ ನಂ 4ಕ್ಕಾಗಿ ಬಾಕ್‌ರ ಸೂಟ್‌ನ ಸರಬಂಡೇ” ಎಂದು ತಮ್ಮ ಪೋಸ್ಟ್‌ನಲ್ಲಿ ಯೋ-ಯೋ ಮಾ ಕ್ಯಾಪ್ಷನ್ ಹಾಕಿದ್ದಾರೆ.