
ಫ್ರೆಂಚ್‌ನ ಗ್ರೆನೊಬಲ್ ನಗರದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳಿಬ್ಬರು ತಮ್ಮ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಜೀವ ಉಳಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಆದರೆ ಯಾವುದೇ ದಾರಿ ಇಲ್ಲದಿದ್ದರಿಂದ 10 ಮೀಟರ್ ಮೇಲಿಂದ ಇಬ್ಬರು ಮಕ್ಕಳು ಜಿಗಿದಿದ್ದಾರೆ. ಈ ರೀತಿ ಜಿಗಿದ ಮಕ್ಕಳ ಪೈಕಿ ಒಬ್ಬ ಮೂರು ವರ್ಷದ ಬಾಲಕನಾಗಿದ್ದು, ಇನ್ನೊಬ್ಬ 10 ವರ್ಷದ ಬಾಲಕ ಎಂದು ತಿಳಿದುಬಂದಿದೆ.
ಮೊದಲಿಗೆ ಮೂರು ವರ್ಷದ ಸಹೋದರನನ್ನು ಜಿಗಿಯುವಂತೆ ಹೇಳಿದ್ದಾನೆ. ಈ ರೀತಿ ಜಿಗಿದ ಬಾಲಕನನ್ನು ಕೆಳಗಿದ್ದ ಸಾರ್ವಜನಿಕರು ರಕ್ಷಿಸಿದ್ದಾರೆ. ಬಳಿಕ ಹಿರಿಯ ಸಹೋದರನೂ ಹೊರ ಜಿಗಿದಿದ್ದಾನೆ. ಇಬ್ಬರು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಕೂಡಲೇ ಸಹೋದರರನ್ನು ಆಸ್ಪತ್ರೆಗೆ ಕರೆದುಕೊಂಡು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದೆ.