ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧವಿರುತ್ತಾಳೆ. ತನ್ನ ಪ್ರಾಣ ಬೇಕಾದರೂ ಕೊಡುತ್ತಾಳೆ. ತನ್ನ ಮಗುವನ್ನು ರಕ್ಷಿಸಿ ತಾನು ಪ್ರಾಣ ತ್ಯಾಗ ಮಾಡಿದ ಹಲವು ತಾಯಂದಿರ ಕತೆಯನ್ನು ನಾವು ಕೇಳಿದ್ದೇವೆ. ಸಿನೆಮಾಗಳಲ್ಲಿ ನೋಡಿದ್ದೇವೆ.
ಇಲ್ಲಿ ಹೇಳುತ್ತಿರುವುದು ಕತೆಯಲ್ಲ, ನಿಜವಾದ ಘಟನೆ. ಮಗನನ್ನು ರಕ್ಷಿಸಿ ತಾಯಿ ಪ್ರಾಣ ತ್ಯಾಗ ಮಾಡಿದ
ಹೃದಯ ವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಸತಿ ಸಮುಚ್ಚಯವೊಂದಕ್ಕೆ ಬೆಂಕಿ ಹೊತ್ತಿ ಉರಿಯುತ್ತಿರುತ್ತದೆ. ರಾಚೆಲ್ ಲಾಂಗ್ ಎಂಬ ಮಹಿಳೆ ತನ್ನ ಮೂರು ವರ್ಷದ ಮಗ ಜಾಮ್ಸನ್ ಲಾಂಗ್ ನೊಂದಿಗೆ ಅಲ್ಲಿ ಸಿಕ್ಕಿಹಾಕಿಕೊಂಡಿರುತ್ತಾಳೆ.
ಬೆಂಕಿಯ ಕೆನ್ನಾಲಿಗೆ ಇನ್ನೇನು ಚಾಚಿ ಇಬ್ಬರನ್ನೂ ಬಲಿ ಪಡೆಯುತ್ತದೆ ಎನ್ನುವ ಹೊತ್ತಿಗೆ ತಾಯಿ ಸಹಾಯಕ್ಕಾಗಿ ಅಂಗಲಾಚಿ ಸೋತು ಹತಾಶೆಯಿಂದ ತನ್ನ ಮಗನನ್ನು ಎರಡನೇ ಮಹಡಿಯಿಂದ ಎಸೆದು ಬಿಡುತ್ತಾಳೆ. ಅದನ್ನು ನೋಡುತ್ತಿದ್ದ ಫಿಲಿಪ್ ಬ್ಲ್ಯಾಂಕ್ ಎಂಬ 28 ವರ್ಷದ ವ್ಯಕ್ತಿ ಮಗುವನ್ನು ತನ್ನ ಬಾಹುಗಳಲ್ಲಿ ಹಿಡಿದು ಬಾಲಕ ನೆಲಕ್ಕೆ ಬೀಳಲು ಕೊಡದೇ ರಕ್ಷಿಸುತ್ತಾರೆ.
ಆದರೆ, ಈ ಘಟನೆಯಲ್ಲಿ ತಾಯಿ ಸುಟ್ಟು ಹೋಗಿದ್ದಾಳೆ. “ತನ್ನ ಮಗನನ್ನು ರಕ್ಷಿಸಿ ತಾನು ಪ್ರಾಣ ಬಿಟ್ಟ ತಾಯಿ ನಿಜವಾದ ಹಿರೋ” ಎಂದು ಜೀವ ರಕ್ಷಕ ಬ್ಲ್ಯಾಂಕ್ ಎಬಿಸಿ ನ್ಯೂಸ್ ನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
https://www.youtube.com/watch?time_continue=2&v=NSoshSchUJI&feature=emb_logo