
ಇಸ್ತಾಂಬುಲ್: ಬೀಳುತ್ತಿದ್ದ ಮನೆಯಿಂದ ವ್ಯಕ್ತಿಯೊಬ್ಬ ಅದೃಷ್ಟವಶಾತ್ ಬಚಾವಾದ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ಸಿಬಿಎಸ್ ನ್ಯೂಸ್ ಅಪ್ ಲೋಡ್ ಮಾಡಿರುವ ವಿಡಿಯೋವನ್ನು 24,800 ಜನ ವೀಕ್ಷಿಸಿದ್ದಾರೆ.
ಟರ್ಕಿ ದೇಶದ ರಾಜಧಾನಿ ನಗರ ಇಸ್ತಾಂಬುಲ್ ನಲ್ಲಿ ನಡೆದ ಘಟನೆ ಇದಾಗಿದೆ. ವ್ಯಕ್ತಿಯೊಬ್ಬ ಮನೆಯೊಳಗೆ ಹೋಗುತ್ತಿರುತ್ತಾನೆ.ಭಾರಿ ಬಿರುಗಾಳಿ ಬೀಸಿ ಮನೆ ಧ್ವಂಸವಾಗುತ್ತದೆ.
ಮನೆಯ ಟೆರೆಸ್ ಮೇಲಿದೆ ಹಣ ಗಳಿಕೆಯ ಗುಟ್ಟು
ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಬಚಾವಾದ ಘಟನೆ ಸರ್ವೆಲೆನ್ಸ್ ಕ್ಯಾಮರಾದಲ್ಲಿ ದಾಖಲಾಗಿದೆ. ನೋಡಿದರೆ ಹೃದಯ ಬಡಿತ ನಿಂತಂತಾಗುತ್ತದೆ. ವಿಡಿಯೋ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.