ಅಮೆರಿಕಾದ ಅಲ್ಬಮಾ ನಗರದಲ್ಲಿ ಇತ್ತೀಚೆಗೆ ನಡೆದ ಕಳ್ಳತನವೊಂದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ಬಂದ್ ಆಗಿದ್ದ ಅಲ್ಬಮಾ ಹನ್ ಸ್ಟವಿಲ್ಲೆ ರೆಸ್ಟೋರೆಂಟ್ ಗೆ ನುಗ್ಗಿ ಹಣ ಹಾಗೂ ಒಂದಿಷ್ಟು ಮದ್ಯದ ಬಾಟಲಿಗಳನ್ನು ಎತ್ತಿಕೊಂಡು ಹೋಗಿದ್ದಾನೆ.
ಮೊದಲು ರೆಸ್ಟೋರೆಂಟ್ ಒಳಬಂದ ಕಳ್ಳ ಸಿಸಿ ಕ್ಯಾಮರಾ ಇರುವುದನ್ನು ಗುರುತಿಸುತ್ತಾನೆ.ನಂತರ ಸಿಬ್ಬಂದಿ ಕೊಠಡಿಯ ಬಳಿ ಹೋಗಿ ಒಂದು ಕಪ್ಪು ಜಾಕೆಟ್ ತೊಟ್ಟುಕೊಂಡು ಹೊಲಸಾದ ಏಪ್ರನ್ ನ್ನು ಮುಖಕ್ಕೆ ಸುತ್ತಿಕೊಂಡು ಬರುತ್ತಾನೆ. ನಂತರ ಕಳ್ಳತನ ಮಾಡಿಹೋಗಿದ್ದಾನೆ.
ಈ ಕುರಿತು ಸ್ಥಳೀಯ ವಾಹಿನಿ ವರದಿ ಮಾಡಿದೆ. ಪಾಟ್ ಸಮರೀಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದು, ಸಿಸಿ ಟಿವಿ ಫುಟೇಜ್ ನಿಂದ ತೆಗೆದ ಕೆಲವು ಫೋಟೋಗಳನ್ನು ಅಪ್ ಲೋಡ್ ಮಾಡಲಾಗಿದೆ.
“ಕಳೆದ ರಾತ್ರಿ ರೆಸ್ಟೊರೆಂಟ್ ನಲ್ಲಿ ಕೆಲವು ವಸ್ತುಗಳು ಹಾಳಾಗಿವೆ. ಇಡೀ ಬುಟೀಕ್ ಕಳ್ಳತನವಾಗಿದೆ. ಆದ ನಷ್ಟವನ್ನು ನಾವು ಸಂಪಾದಿಸಲಿದ್ದೇವೆ. ಆದರೆ, ಕಳ್ಳ ಮಾಸ್ಕ್ ಪಾಲಿಸಿಗೆ ಗೌರವ ನೀಡಿದ್ದಾನೆ. ಆದರೆ, ಒಂದಲ್ಲ ಒಂದು ದಿನ ಆತ ಸಿಕ್ಕೇ ಸಿಗುತ್ತಾನೆ. ಫೋಟೋದಲ್ಲಿ ಆತ ಮುಖ ಮುಚ್ಚಿಕೊಂಡಿದ್ದಾನೆ. ಕಾಣುವ ಕಾಲು, ಕೈಗಳನ್ನಾದರೂ ನೋಡಿ ಯಾರಾದರೂ ಗುರುತಿಸಿದರೆ ನಮ್ಮನ್ನು ಸಂಪರ್ಕಿಸಿ” ಎಂದು ರೆಸ್ಟೋರೆಂಟ್ ಪಾರ್ಟನರ್ ಜೆರೆಮಿ ಕಾನ್ಸೆಪ್ಶನ್ ತಿಳಿಸಿದ್ದಾರೆ.
ಆತ ಕಳ್ಳತನದ ಸಂದರ್ಭದಲ್ಲಿ ಸಾಕಷ್ಟು ಕುಡಿದಿದ್ದ. ಇದರಿಂದ ಆತ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದ ಇನ್ನಷ್ಟು ಹಣ ಹಾಗೂ ಮದ್ಯದ ಬಾಟಲಿಗಳನ್ನು ಬಿಟ್ಟು ಹೋಗಿದ್ದಾನೆ ಎಂದು ಅವರು ಹೇಳಿದ್ದಾರೆ.
https://www.facebook.com/phatsammys/posts/3247353078636460