
ಇದೀಗ ಇಂತದ್ದೇ ಇನ್ನೊಂದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಸಿಎನ್ಎನ್ ಚಾನೆಲ್ನ ವರದಿಗಾರ ಮನು ರಾಜು ಎಂಬವರು ವಾಷಿಂಗ್ಟನ್ ಡಿಸಿಯಿಂದ ಲೈವ್ಗೆ ಬಂದಿದ್ದರು. ಈ ವೇಳೆ ಅವರ ಹೆಗಲ ಮೇಲೆ ಹುಳವೊಂದು ಓಡಾಡಿದೆ. ಅದು ಕಾಲರ್ನಿಂದ ಕುತ್ತಿಗೆ ತುಂಬೆಲ್ಲ ಓಡಾಡಿದೆ.
ಹುಳ ಲೈವ್ನಲ್ಲೇ ಈ ರೀತಿ ಹರಿದಾಡುತ್ತಿದ್ದರೂ ಸಹ ರಾಜುಗೆ ಇದರ ಬಗ್ಗೆ ಲಕ್ಷ್ಯವಿರಲಿಲ್ಲ. ಹುಳ ತನ್ನ ಮೈಮೇಲೆ ಹರಿದಾಡ್ತಾ ಇರೋದ್ರ ಬಗ್ಗೆ ತಿಳೀತಾ ಇದ್ದಂತೆ ಅವರು ಕಿರುಚುತ್ತಾ ಶರ್ಟ್ ಕೊಡವಿದ್ದಾರೆ. ಈ ವಿಡಿಯೋವನ್ನ ಟ್ವಿಟರ್ನಲ್ಲಿ ಸ್ವತಃ ಮನು ರಾಜು ಶೇರ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.