alex Certify ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದಮ್ಮನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದಮ್ಮನ ವಿಡಿಯೋ

ಬಾಲ್ಕನಿಯ ತುದಿಯಲ್ಲಿ ನಿಂತ ಮಗು, ಗೋಡೆಯ ಮೇಲಿನ ಕಂಬಿ ಹಿಡಿಯಲು ಹೊರಟರೆ ಈ ಬೆಕ್ಕು ಅದಕ್ಕೆ ಅವಕಾಶವೇ ನೀಡುತ್ತಿಲ್ಲ. ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಕ್ಕು – ಮಗುವಿನ ಜುಗಲ್ ಬಂದಿಯ ವಿಡಿಯೋವನ್ನು ಅನೇಕರು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ತೊದಲು ನುಡಿಗಳನ್ನಾಡುತ್ತಾ, ತೊಡರುಗಾಲು ಹಾಕುತ್ತಾ ನಡೆಯುವ ಹಸುಗೂಸು ಅಪಾಯದ ಅಂಚಿನಲ್ಲಿ ನಿಂತಿರುವುದನ್ನು ಗಮನಿಸಿದ ಬೆಕ್ಕು ಅದಕ್ಕೆ ತಡೆದು ನಿಲ್ಲಿಸುತ್ತದೆ.

ಬಾಲ್ಕನಿಯ ತುದಿಯಲ್ಲಿ ಕಂಬಿ ಹಿಡಿದು ನಿಂತ ಮಗುವನ್ನ ನೋಡಿದ ಬೆಕ್ಕು, ಇತ್ತ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿರುವರನ್ನೂ ಗಮನಿಸಿ ಸುಮ್ಮನಿಸುತ್ತಿರುತ್ತದೆ. ಮೊಬೈಲ್ ನಲ್ಲಿ ವಿಡಿಯೋ ಶೂಟ್ ಮಾಡುತ್ತಿರುವರು ಮಗುವನ್ನ ತಡೆಯಬಹುದು ಎಂದುಕೊಂಡೋ ಏನೋ ಮಗುಂ ಆಗಿರುತ್ತದೆ.

ಕರುಳಿನ ಆರೋಗ್ಯ ಉತ್ತಮವಾಗಿರಲು ಈ ಪಾನೀಯ ಬೆಸ್ಟ್

ಬಹಳ ಹೊತ್ತಾದರೂ ಯಾರು ಮಗುವಿನತ್ತ ಗಮನಿಸುತ್ತಿಲ್ಲ ಎಂಬುದನ್ನ ಅರಿತ ಬೆಕ್ಕು ತಾನೇ, ತನ್ನ ಪಾದಗಳಿಂದ, ಕಂಬಿ ಹಿಡಿದ ಮಗುವಿನ ಕೈಗಳನ್ನು ಬಿಡಿಸುತ್ತದೆ.

ಆ ಕಂದಮ್ಮನೂ ಬೆಕ್ಕಿನಿಂದ ಸ್ವಲ್ಪ ದೂರ ಸರಿಯುವುದು, ಮತ್ತೆ ಮತ್ತೆ ಕಂಬಿಯ ಮೇಲೆ ಕೈ ಇಡುತ್ತದೆ. ಬೆಕ್ಕು ಅದನ್ನು ಬಿಡಿಸುವುದು. ಇದು ಪದೇ ಪದೇ ನಡೆಯುತ್ತದೆ.

https://twitter.com/buitengebieden_/status/1352696937489825796?ref_src=twsrc%5Etfw%7Ctwcamp%5Etweetembed%7Ctwterm%5E1352696937489825796%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fcat-stops-toddler-from-holding-the-balcony-railing-viral-video-wins-praise-watch%2F711371

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...