ಬೆಕ್ಕುಗಳು ತಮ್ಮ ತುಂಟತನದ ವರ್ತನೆಗೆ ಬಹಳ ಖ್ಯಾತಿ ಪಡೆದುಕೊಂಡಿವೆ. ಇಂಥ ಒಂದು ಚೇಷ್ಟೆ ಬೆಕ್ಕೊಂದು, ತನಗೆ ಕಾಫಿ ವಾಸನೆ ಆಗಿ ಬಾರದ ಕಾರಣ ಅದನ್ನು ಹೂತು ಹಾಕಲು ಯತ್ನಿಸುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಬಲೇ ಮಜಾ ಕೊಡುತ್ತಿದೆ.
ಕಾಫಿ ಮಗ್ ಅನ್ನು ಮೂಸಿ ನೋಡಿದ ಈ ಬೆಕ್ಕು, ಬಳಿಕ ಮೇಜಿನ ಮೇಲೆ, ಮಣ್ಣಿನಲ್ಲಿ ಗುಂಡಿ ತೋಡುವಂತೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
20 ಸೆಕೆಂಡ್‌ಗಳ ಈ ವಿಡಿಯೋ ವೈರಲ್ ಆಗಿದ್ದು, ಖುದ್ದು ಬೆಕ್ಕುಗಳನ್ನು ಸಾಕಿರುವ ಮಂದಿ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.