
ಬಂಡೆ ಮೇಲೆ ಭವ್ಯವಾದ ಶ್ರೀಮಂತ ಬಂಗಲೆ ಇರುವ ಫೋಟೋವೊಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿ ಭಾರಿ ವೈರಲ್ ಆಗಿತ್ತು.
ಸಮುದ್ರದ ಮಧ್ಯ ಇರುವ ಬಂಡೆ ಮೇಲೆ ಬಂಗಲೆ ಇರುವ ಈ ಚಿತ್ರವನ್ನು ಬಹಳಷ್ಟು ಜನ ಅಚ್ಚರಿ ಎಂಬ ರೀತಿಯಲ್ಲಿ ಹಂಚಿಕೊಂಡಿದ್ದರು. ಆದರೆ ಇದು ಫೇಕ್ ಚಿತ್ರ ಎಂಬುದು ಬಳಿಕ ತಿಳಿದು ಬಂತು.
ಥಾಯ್ಲೆಂಡ್‌ನ ಜೇಮ್ಸ್ ಬಾಂಡ್ ಐಲ್ಯಾಂಡ್‌ನ ಬೃಹತ್ ಬಂಡೆಗೆ ಜರ್ಮನಿಯಲ್ಲಿರುವ ಲಿಕ್ಟೆನ್‌ಸ್ಟೀನ್ ಕ್ಯಾಸಲ್ ಅನ್ನು ಫೋಟೋಶಾಪ್ ಮಾಡಿ ಈ ಚಿತ್ರವನ್ನು ಸೃಷ್ಟಿಸಲಾಗಿತ್ತು.