ಅದೃಷ್ಟ ಚೆನ್ನಾಗಿದ್ದಾರೆ ಏನಾದರೂ ಬದುಕಬಹುದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ.
ಹೌದು, ಇಂಗ್ಲೆಂಡ್ನ ಮಾವ್ಗನ್ ಪೋತ್ ಬೀಚ್ ಬಳಿ ವ್ಯಕ್ತಿಯೊಬ್ಬ ಬರುತ್ತಿದ್ದು, ಕಾರಿನ ಮೇಲಿನ ಹಿಡಿತ ತಪ್ಪಿದ್ದರಿಂದ ಸುಮಾರು 20 ಅಡಿ ಮೇಲಿಂದ ಕೆಳಕ್ಕೆ ಉರುಳಿದೆ. ಈ ರೀತಿ ಬೀಳುವಾಗ ಕಾರು ಬೀಚ್ ಬಳಿಯಿದ್ದ ಟೆಂಟ್ ಒಂದರ ಮೇಲೆ ಬಿದ್ದಿದೆ. ಆದರೆ ಟೆಂಟ್ನಲ್ಲಿದ್ದ ದಂಪತಿಗಳು ಬೀಚ್ ನೋಡಲು ಹೋಗಿದ್ದರಿಂದ ಪಾರಾಗಿದ್ದಾರೆ.
ಇನ್ನು 20 ಅಡಿ ಮೇಲಿಂದ ಬಿದ್ದು, ಎರಡು ಮೂರು ಪಲ್ಟಿ ಹೊಡೆದರೂ ಏರ್ ಬ್ಯಾಗ್ ಓಪನ್ ಆಗಿಲ್ಲ. ಆದರೂ ಚಾಲಕನಿಗೆ ಚಿಕ್ಕ ಪುಟ್ಟ ಗಾಯ ಹೊರತು ಇನ್ಯಾವುದೇ ಅಪಾಯವಾಗದಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾರು ಮೇಲಿಂದ ಕೆಳಗೆ ಬೀಳುವಾಗ ಮೆಲ್ಲಗೆ ಅಪ್ಪಳಿಸಿರುವುದರಿಂದ ಏರ್ ಬ್ಯಾಗ್ ಓಪನ್ ಆಗಿಲ್ಲ. ಆದರೆ ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
https://www.facebook.com/PadstowCoastguard/posts/3104533349615813