
ಒಂದರ ಮೇಲೊಂದರಂತೆ ಪೇರಿಸಿಟ್ಟ ಬೈಸಿಕಲ್ ಗಳನ್ನ ಹೊತ್ತೊಯ್ಯುತ್ತಿರುವ ಕಾರಿನ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾದ ರಸ್ತೆಯೊಂದರಲ್ಲಿ ಮುಂದೆ ಹೋಗುತ್ತಿದ್ದ ಕಾರಿನ ಮೇಲೆ ಬೈಸಿಕಲ್ ಬೆಟ್ಟವೇ ಬೆಳೆದು ನಿಂತಿದೆಯೇನೋ ಎನಿಸುವಷ್ಟು ಸೈಕಲ್ ಗಳ ರಾಶಿ ಇದೆ. ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಈ ಚಿತ್ರ ಸೆರೆಯಾಗಿದೆ.
ಡ್ಯಾಶ್ ಕ್ಯಾಮ್ ಓನರ್ಸ್ ಆಸ್ಟ್ರೇಲಿಯಾ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಫೋಟೋ ವೈರಲ್ ಆಗಿದ್ದು, ರಜೆ ಅವಧಿಯಲ್ಲಿ ಮಕ್ಕಳೆಲ್ಲರ ಸೈಕಲ್ ಗಳನ್ನು ಕಾರಿನಲ್ಲಿ ಹಾಕಿಕೊಂಡು ತರುವುದು ಒಂದು ಸವಾಲೇ ಸರಿ ಎಂಬ ಅಡಿ ಟಿಪ್ಪಣಿ ಬರೆಯಲಾಗಿದೆ.
ನೆಟ್ಟಿಗರು ಫೋಟೋ ಕಂಡು ಫಿದಾ ಆಗಿದ್ದು, ತರಹೇವಾರಿ ಕಮೆಂಟ್ ಗಳು ಬಂದಿವೆ.
https://www.facebook.com/DashCamOwnersAustralia/posts/3716407391752207