ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆ ನಡೆಸಿದ ಹುಚ್ಚಾಟದಿಂದ ಸೆನೆಟ್ ನಲ್ಲಿದ್ದವರ ಜೀವಗಳು ಬಲಿಯಾಗಬೇಕಿತ್ತು. ಆದರೆ, ಪ್ರಾಣ ಪಣಕ್ಕಿಟ್ಟ ಪೊಲೀಸ್ ಅಧಿಕಾರಿಯೊಬ್ಬ ದೊಡ್ಡ ಅನಾಹುತವೊಂದನ್ನು ತಪ್ಪಿಸಿ, ಸಾಹಸ ಮೆರೆದಿದ್ದಾರೆ.
ನೂತನ ಅಧ್ಯಕ್ಷ ಜೋ ಬೈಡನ್ ವಿರುದ್ಧ ಸಮರ ಸಾರಿದ್ದ ಟ್ರಂಪ್ ಪಡೆ ಸಂಸತ್ ಗೆ ನುಗ್ಗಿ ದಾಂಧಲೆ ನಡೆಸಿತ್ತು. ಸೆನೆಟ್ ಒಳಗೂ ನುಗ್ಗಲು ಯತ್ನಿಸಿತ್ತು. ಹಾಗೊಂದು ವೇಳೆ ಒಳ ನುಗ್ಗಿದ್ದೇ ಆಗಿದ್ದರೆ, ಹತ್ತಾರು ಜೀವ ಬಲಿಯಾಗಿರುತ್ತಿತ್ತು.
ಗಲಭೆ ಸಂದರ್ಭದಲ್ಲಿ ಸೆನೆಟ್ ಸಭಾಂಗಣದ ಬಳಿಯೇ ಇದ್ದ ಪೊಲೀಸ್ ಅಧಿಕಾರಿ ಯುಗೇನ್ ಗುಡ್ ಮ್ಯಾನ್, ರೊಚ್ಚಿಗೆದ್ದು ಸೆನೆಟ್ ನತ್ತ ನುಗ್ಗುತ್ತಿದ್ದ ಟ್ರಂಪ್ ಪಡೆಯ ದಾರಿ ತಪ್ಪಿಸುವಲ್ಲಿ ಯಶಸ್ವಿಯಾದರು.
ಮೊದಲೇ ಆಕ್ರೋಶಭರಿತರಾಗಿದ್ದ ಟ್ರಂಪ್ ಹುಡುಗರು, ಗುಡ್ ಮ್ಯಾನ್ ಮಾತು ಕೇಳಿ ತಮ್ಮ ಆಕ್ರೋಶವನ್ನು ಸೆನೆಟ್ ಸಭಾಂಗಣದ ಬದಲು ಬೇರೆಡೆ ಹೊರಳಿಸಿದರು. ಇಲ್ಲದಿದ್ದರೆ, ಆಗುತ್ತಿದ್ದ ಅನಾಹುತವೇ ಬೇರೆಯದಿತ್ತು. ಈ ಘಟನೆಯಿಂದ ಗುಡ್ ಮ್ಯಾನ್ ಸಾಹಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
https://twitter.com/Todd_Stein/status/1348367740847804416?ref_src=twsrc%5Etfw%7Ctwcamp%5Etweetembed%7Ctwterm%5E1348367740847804416%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fcapitol-cop-hailed-hero-for-steering-angry-rioters-away-from-senate-chamber-3271742.html