ಕೋವಿಡ್-19 ಕಾಟ ಜಗತ್ತಿನೆಲ್ಲೆಡೆ ಎಗ್ಗಿಲ್ಲದೇ ಸಾಗುತ್ತಿರುವ ಕಾರಣ ಈ ಸಾಂಕ್ರಾಮಿಕಕ್ಕೆ ಕೊನೆ ಮೊದಲೇ ಇಲ್ಲವೆಂಬಂತಾಗಿದೆ. ಇದೇ ವೇಳೆ ಸಾರ್ವಜನಿಕ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮ ಇಟ್ಟುಕೊಳ್ಳಲು ಜಗತ್ತಿನಾದ್ಯಂತ ಅನೇಕ ಸರ್ಕಾರಗಳು ಪ್ರಯತ್ನಿಸುತ್ತಿರುವುದು ಹೊಸ ಭರವಸೆಯನ್ನು ಸೃಷ್ಟಿಸಿದೆ.
ಇದೇ ವೇಳೆ ಕೆನಡಾದ ಪೈಲಟ್ ಒಬ್ಬರು ತಮ್ಮ ವಿಮಾನವನ್ನು ಬಾನಂಗಳದಲ್ಲಿ ಲಸಿಕೆಯ ಆಕಾರದಲ್ಲಿ ವಿಮಾನವನ್ನು ಚಲಾಯಿಸಿದ್ದು, ವೈರಸ್ ಅನ್ನು ಮಣಿಸಲು ಲಸಿಕಾ ಕಾರ್ಯಕ್ರಮ ಸಫಲವಾಗಲಿದೆ ಎಂಬ ಹೊಸ ಭರವಸೆ ಮೂಡಿಸಿದ್ದಾರೆ.
ಕೆನಡಾ-ಅಮೆರಿಕ ಗಡಿಯಲ್ಲಿರುವ ಜಗದ್ವಿಖ್ಯಾತ ನಯಾಗರಾ ಫಾಲ್ಸ್ ನೆತ್ತಿಯ ಮೇಲೆ ತನ್ನ ವಿಮಾನವನ್ನು ಹಾರಿಸಿದ ಈ ಪೈಲಟ್ ಹೃದಯ ಹಾಗೂ ಸಿರಿಂಜ್ ಆಕೃತಿಯಲ್ಲಿ ಚಿತ್ರ ಬಿಡಿಸಿದ್ದಾರೆ. ಚಿತ್ರವನ್ನು ಫ್ಲೈಟ್‌ರಾಡಾರ್ 24 ಹೆಸರಿನ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.
https://twitter.com/jcmanc/status/1349045752543256577?ref_src=twsrc%5Etfw%7Ctwcamp%5Etweetembed%7Ctwterm%5E1349045752543256577%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fcanadian-pilot-takes-unique-route-draws-syringe-in-sky-to-express-covid-19-vaccine-love-3283640.html