ಕೊರೊನಾ ವೈರಸ್ ಕಾರಣಕ್ಕೆ ಈಗ ಮಾಸ್ಕ್ ಕೂಡ ಬಟ್ಟೆಯಂತೆ ಜೀವನದ ಒಂದು ಭಾಗವಾಗಿದೆ. ಮಾಸ್ಕ್ ಧರಿಸಿ ನಾವು ಹೊರ ಬಿದ್ದರೆ, ಅದು ನಮ್ಮನ್ನು ವೈರಸ್ ನಿಂದ ರಕ್ಷಿಸುತ್ತದೆ ಮತ್ತು ಬೇರೆಯವರು ನಮ್ಮಿಂದ ಸೋಂಕಿತರಾಗುವುದನ್ನು ತಪ್ಪಿಸುತ್ತವೆ.
ಹಾಗಾದರೆ ಎಲ್ಲ ಮಾಸ್ಕ್ ಗಳೂ ಸುರಕ್ಷಿತವಾ..? ಅವು ನೀರಿನ ಹನಿಗಳು ಹೊರ ಹೋಗುವುದನ್ನು ಹಾಗೂ ಒಳ ಬರುವುದನ್ನು ತಪ್ಪಿಸಬಲ್ಲವಾ ಎಂಬುದನ್ನು ಅಮೆರಿಕದ ಡ್ಯೂಕ್ ವಿಶ್ವ ವಿದ್ಯಾಲಯದ ಫಿಜೀಶಿಯನ್ ಗಳು ಅಧ್ಯಯನ ಮಾಡಿದ್ದಾರೆ.
ಬಹುತೇಕ ಫೇಸ್ ಮಾಸ್ಕ್ ಗಳು ನೀರಿನ ಹನಿಗಳು ತಡೆಯಬಲ್ಲವು. ಎಲ್ಲರೂ ಮಾಸ್ಕ್ ಧರಿಸಿದರೆ ಶೇ.99 ರಷ್ಟು ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಫಿಜೀಶಿಯನ್ ವೆಸ್ಟ್ ಮೆನ್ ಹೇಳಿದ್ದಾರೆ.