ಪಾಕಶಾಸ್ತ್ರದ ಜಗತ್ತಿನಲ್ಲಿ ಹೊಸ ಅನ್ವೇಷಣೆಗಳಿಗೆ ಯಾವತ್ತೂ ಬರವಿಲ್ಲ. ಪ್ರಾಚೀನ ಅಡುಗೆ ವಿಧಾನಗಳಿಂದ ಅತ್ಯಾಧುನಿಕ ವಿಧಾನಗಳವರೆಗೂ ಬಹಳಷ್ಟು ವಿಸ್ಮಯಕಾರಿ ಸಂಗತಿಗಳನ್ನು ದಿನಂಪ್ರತಿ ನೆಟ್‌ನಲ್ಲಿ ನೋಡುತ್ತಲೇ ಇರುತ್ತೇವೆ.
“ಚಲನಾಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿದರೆ, ಚಿಕನ್‌ಅನ್ನು ಬೇಯಿಸಲು ನಾನು ಅದಕ್ಕೆ ಎಷ್ಟು ಜೋರಾಗಿ ಬಾರಿಸಬೇಕು?” ಎಂದು ರೆಡ್ಡಿಟ್‌ನಲ್ಲಿ ಎರಡು ವರ್ಷಗಳ ಹಿಂದೆ ಕೇಳಲಾದ ಫನ್ನಿ ಪ್ರಶ್ನೆಯೊಂದಕ್ಕೆ ಉತ್ತರ ಕೊಡಲು ಬಹಳ ಮಂದಿ ಪಾಕಪ್ರವೀಣರು ತಲೆ ಕೆಡಿಸಿಕೊಂಡಿದ್ದರು.
ಮೊದಲ ಡೇಟ್ನಲ್ಲಿ ಅಪಹಾಸ್ಯಕ್ಕೀಡಾದ ಮಹಿಳೆ..! ವಿಡಿಯೋ ವೈರಲ್
ಇದೀಗ, ಬಹಳ ಪ್ರಯತ್ನಗಳ ಬಳಿಕ ಯೂಟ್ಯೂಬರ್ ಲೂಯಿಸ್ ವೀಯ್ಸ್ ಅವರು ಇಡೀ ಕೋಳಿಯನ್ನು ಬ್ಯಾಗ್ ಒಂದರಲ್ಲಿ ಇಟ್ಟುಕೊಂಡು, ಅದನ್ನು ಬಾರಿಸುತ್ತಲೇ ಇರುವ ಮೂಲಕ ಬೇಯಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಬ್ಯಾಗಲ್ಲಿದ್ದ ಕೋಳಿಯನ್ನು ಆರು ಗಂಟೆಗಳ ಅವಧಿಯಲ್ಲಿ 1,35,000 ಬಾರಿ ಹೊಡೆದು ಕೊನೆಗೂ ಬೇಯಿಸಲಾಗಿದೆ.