ಕೊರೊನಾ ವೈರಸ್ ವಿಶ್ವಕ್ಕೆ ಬಂದು ಅಪ್ಪಳಿಸಿದ ಬಳಿಕ ಮಾಸ್ಕ್ ಬಳಕೆ ಕಡ್ಡಾಯವಾಗಿ ಹೋಗಿದೆ. ಆದರೆ ಈ ಮಾಸ್ಕ್ಗಳನ್ನ ಮರು ಬಳಕೆ ಮಾಡಬಹುದೇ ಬೇಡವೇ ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಸರ್ಜಿಕಲ್ ಮಾಸ್ಕ್ಗಳನ್ನ ಹೇಗೆ ಮರುಬಳಕೆ ಮಾಡಬಹುದು ಅನ್ನೋದರ ಬಗ್ಗೆ ಫ್ರೆಂಚ್ ಮೈಕ್ರೋಬಯೋಲಾಜಿಸ್ಟ್ ಒಬ್ಬರು ಸಲಹೆ ನೀಡಿದ್ದಾರೆ.
ಒಮ್ಮೆ ಬಳಕೆ ಮಾಡಿದ ಮಾಸ್ಕ್ಗಳನ್ನ ಒಂದು ಕವರ್ ಒಳಗೆ ಹಾಕಿ ಅದರ ಮೇಲೆ ನೀವು ಬಳಕೆ ಮಾಡಿದ ದಿನಾಂಕ ಬರೆದು ಹಾಗೆ ಇಡಿ. 7 ದಿನಗಳ ಬಳಿಕ ಮಾಸ್ಕ್ನಲ್ಲಿರುವ ಎಲ್ಲಾ ವೈರಸ್ಗಳು ಸಾಯೋದ್ರಿಂದ ನೀವು ಇದನ್ನ ಮರುಬಳಕೆ ಮಾಡಬಹುದು ಅಂತಾ ವಿಜ್ಞಾನಿಗಳು ಹೇಳಿದ್ದಾರೆ.
ಕೆಲಸದ ಒತ್ತಡ ಹೊಂದಿರುವ ತುರ್ತು ಸಿಬ್ಬಂದಿ ತಮ್ಮ ಎನ್ 95 ಮಾಸ್ಕ್ಗಳನ್ನ ಈ ರೀತಿ ಬಳಕೆ ಮಾಡಬಹುದಾಗಿದೆ. 5 ರಿಂದ 10 ಬಾರಿ ಈ ವಿಧಾನದಲ್ಲಿ ಬಳಕೆ ಮಾಸ್ಕ್ಗಳನ್ನ ಮರು ಬಳಕೆ ಮಾಡಬಹುದಾಗಿದೆ.
ಓವನ್ಗಳಲ್ಲಿ ಮಾಸ್ಕ್ಗಳನ್ನ ಇಟ್ಟು 70-75 ಡಿಗ್ರಿ ಸೆಲ್ಸಿಯಸ್ನಲ್ಲಿ ಬಿಸಿ ಮಾಡುವುದರ ಮೂಲಕವೂ ಮಾಸ್ಕ್ಗಳನ್ನ ಮರುಬಳಕೆ ಮಾಡಬಹುದಂತೆ. ಮಾಸ್ಕ್ಗಳನ್ನ ವಾಶಿಂಗ್ ಮಷಿನ್ ಹಾಕುವ ಬದಲು ಈ ವಿಧಾನಗಳು ಹೆಚ್ಚು ಉಪಯುಕ್ತ ಎನಿಸಲಿವೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.