ವಿಶ್ವದೆಲ್ಲೆಡೆ ತಲ್ಲಣ ತಂದಿರುವ ಕೊರೊನಾ ವೈರಸ್ ಸೊಳ್ಳೆಯಿಂದ ಮನುಷ್ಯರಿಗೆ ಹರಡುತ್ತದೆಯೇ ಎನ್ನುವ ಕುರಿತಾಗಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ನೆಮ್ಮದಿಯ ಮಾಹಿತಿ ಹೊರಬಿದ್ದಿದೆ. ಸೊಳ್ಳೆಗಳಿಂದ ಕೊರೊನಾ ಸೋಂಕು ಹರಡುವುದಿಲ್ಲ ಎನ್ನುವುದು ಗೊತ್ತಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ, ಸೊಳ್ಳೆಗಳು ವೈರಸ್ ಹರಡಲು ಸಾಧ್ಯವಿಲ್ಲ ಎಂದು ಖಚಿತವಾಗಿ ಮೊದಲೇ ಹೇಳಿದೆ. ತಜ್ಞರು ನಡೆಸಿದ ಅಧ್ಯಯನದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಿದ್ಧಾಂತವನ್ನು ಬೆಂಬಲಿಸುವ ನಿರ್ಣಾಯಕ ಫಲಿತಾಂಶ ಕಂಡುಬಂದಿದೆ. ಸೊಳ್ಳೆಗಳಿಂದ ಹರಡುವುದಿಲ್ಲ ಎಂದು ಖಚಿತವಾಗಿ ಹೇಳಲಾಗಿದೆ.
ಸೈಂಟಿಫಿಕ್ ರಿಪೋರ್ಟ್ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನೆ ಲೇಖನದಂತೆ ಸೊಳ್ಳೆಗಳಿಂದ ಕೊರೊನಾ ವೈರಸ್ ಹರಡಲು ಸಾಧ್ಯವಿಲ್ಲವೆಂದು ತಿಳಿಸಲಾಗಿದೆ. ಈಡೀಸ್ ಈಜಿಪ್ಟಿ, ಈಡೀಸ್ ಅಲ್ಬೋಪಿಕ್ಟುಸ್, ಕ್ಯಲೆಕ್ಸ್ ಕ್ವಿನ್ ಕ್ವೆಫಾಸ್ಕಿಟಸ್ ಸೊಳ್ಳೆಗಳ ಪ್ರಭೇದಗಳ ಅಧ್ಯಯನದಲ್ಲಿ ಇದು ಗೊತ್ತಾಗಿದೆ. ಕೊರೊನಾ ಸೋಂಕು ಉಗಮ ಸ್ಥಾನ ಚೀನಾದಲ್ಲಿ ಈ ಸೊಳ್ಳೆಗಳ ಪ್ರಭೇದಗಳಿವೆ. ಅಮೆರಿಕಾದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿ ಅಧ್ಯಯನ ಸಂಶೋಧಕ ಸ್ಟೀಫನ್ ಹಿಗ್ಸ್ ನೀಡಿರುವ ಮಾಹಿತಿಯಂತೆ ಸೊಳ್ಳೆಗಳಿಂದ ಸೋಂಕು ಹರಡುವ ಸಾಧ್ಯತೆ ಇಲ್ಲ ಎನ್ನುವುದು ಖಚಿತವಾಗಿದೆ.