alex Certify ಕೊರೊನಾ ಸೋಂಕನ್ನು ಕಂಡುಹಿಡಿಯಬಲ್ಲವಂತೆ ಶ್ವಾನಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕನ್ನು ಕಂಡುಹಿಡಿಯಬಲ್ಲವಂತೆ ಶ್ವಾನಗಳು..!

ಶ್ವಾನ ಮಾನವನ ಸಹಚರ ಎಂಬ ಮಾತು ಯುಗ ಯುಗಗಳಿಂದ ನಡೆದುಕೊಂಡು ಬರ್ತಿದೆ. ಇದೀಗ ಕೋವಿಡ್​ ವಿರುದ್ಧದ ಹೋರಾಟದಲ್ಲೂ ಈ ಶ್ವಾನಗಳು ನಮಗೆ ನೆರವಾಗುತ್ತವಾ ಎಂಬ ಪ್ರಶ್ನೆ ಮೂಡಿದೆ. ಹೊಸ ಅಧ್ಯಯನವೊಂದರ ಪ್ರಕಾರ ನಿರ್ದಿಷ್ಟ ವೈದ್ಯಕೀಯ ತರಬೇತಿ ಪಡೆದ ನಾಯಿಗಳು ತಮ್ಮ ಗ್ರಹಿಕ ಸಾಮರ್ಥ್ಯದ ಮೂಲಕ ಜನರಿಗೆ ಸ್ಕ್ರೀನಿಂಗ್​ ಟೆಸ್ಟ್ ನಡೆಸಬಲ್ಲವು ಎಂದು ಹೇಳಲಾಗ್ತಿದೆ.

ಇತ್ತೀಚೆಗಷ್ಟೇ ನಡೆಸಿದ ಸಂಶೋಧನೆಯ ಪ್ರಕಾರ ಶ್ವಾನಗಳು ಕೊರೊನಾ ಪಾಸಿಟಿವ್​ ರೋಗಿಗಳನ್ನ ಗ್ರಹಿಕೆಯ ಮೂಲಕವೇ ಪತ್ತೆ ಹಚ್ಚಬಲ್ಲವಂತೆ. ಅಲ್ಲದೇ ಅತ್ಯಂತ ತ್ವರಿತವಾಗಿ ಹಾಗೂ ನಿಖರವಾಗಿ ಫಲಿತಾಂಶವನ್ನ ನೀಡಬಲ್ಲವು ಎಂದು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಟಾಮಿ ಡಿಕ್ಕಿ ಹೇಳಿದ್ದಾರೆ.

ಒಂದು ನಾಯಿ ಎರಡು ಬಾರಿ ವ್ಯಕ್ತಿ ಕೊರೊನಾ ಸೋಂಕಿಗೆ ಒಳಗಾಗಿದ್ದನ್ನ ದೃಢೀಕರಿಸಿತ್ತು. ಆ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ವಾರದ ಬಳಿಕ ಬಂದಿದ್ದು ಇದರಲ್ಲಿಯೂ ಕೂಡ ಪಾಸಿಟಿವ್​ ಎಂದೇ ಇದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಶ್ವಾನಗಳಿಗೆ ವಾಸನೆಯ ಮೂಲಕವೇ ಸೋಂಕನ್ನ ಕಂಡುಹಿಡಿಯುವ ವಿಶೇಷ ಶಕ್ತಿ ಇದೆ ಎಂದು ಜರ್ನಲ್​ ಆಫ್​ ಆಸ್ಟಿಯೋಥಪಿಕ್​ ಮೆಡಿಸಿನ್​​ನಲ್ಲಿ ಪ್ರಕಟಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...