ಕಾಂಬೋಡಿಯಾ: ತನ್ನ ತೋಟಕ್ಕೆ ಜೀವಂತ ಸ್ಫೋಟಕಗಳಂದ ಅಲಂಕಾರ ಮಾಡಿದ ನೈರುತ್ಯ ಕಾಂಬೋಡಿಯಾದ ವ್ಯಕ್ತಿಯನ್ನು ಅಲ್ಲಿನ ಸರ್ಕಾರಿ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಮಾರು 30 ಸ್ಫೋಟಗೊಳ್ಳದ ಶೆಲ್ ಗಳನ್ನು ತನ್ನ ಕಂಪೌಂಡ್ ನಲ್ಲಿರುವ ಮರಗಳಿಗೆ ವ್ಯಕ್ತಿ ತೂಗು ಹಾಕಿದ್ದ ಎಂದು ಕಾಂಬೋಡಿಯಾದ ಗಣಿ ಕಾರ್ಯ ಕೇಂದ್ರದ ಅಧಿಕಾರಿ ಕೆನ್ ಶ್ರಿಂಗ್ ತಿಳಿಸಿದ್ದಾರೆ.
ಅವರು ಬುಧವಾರ ಅಲ್ಲಿಗೆ ತೆರಳಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಅವು 1990 ರಲ್ಲಿ ಮುಕ್ತಾಯವಾದ ನಾಗರಿಕ ಯುದ್ಧದ ಕಾಲದ ಸ್ಫೋಟಕಗಳಾಗಿವೆ. ಕೆಲವು ಇನ್ನೂ ಜೀವಂತ ಉಳಿದಿವೆ.
ಆತ ತನ್ನ ಜಮೀನು ಹಾಗೂ ಅಕ್ಕಪಕ್ಕದ ಕಾಡುಗಳಲ್ಲಿ ಬಿದ್ದಿದ್ದ ಸ್ಫೋಟಕಗಳನ್ನು ಆರಿಸಿ ಸ್ಕ್ರಾಬ್ ನವರಿಗೆ ಮಾರಾಟ ಮಾಡುತ್ತಿದ್ದ. ಆ ರೀತಿ ಸ್ಫೋಟಕಗಳನ್ನು ಸಂಗ್ರಹಿಸುವುದು ಮತ್ತು ಮಾರುವುದನ್ನು ಸರ್ಕಾರ ನಿಷೇಧಿಸಿದೆ ಎಂದು ಕೆನ್ ತಿಳಿಸಿದ್ದಾರೆ.