alex Certify ಬ್ರೇಕ್ ಇಲ್ಲದ ಬೈಸಿಕಲ್ ಮೇಲೆ ಬರಿಗಾಲಿನಲ್ಲಿ ರೇಸ್‌ಗೆ ಬಂದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕ್ ಇಲ್ಲದ ಬೈಸಿಕಲ್ ಮೇಲೆ ಬರಿಗಾಲಿನಲ್ಲಿ ರೇಸ್‌ಗೆ ಬಂದ ಬಾಲಕ

ಕಾಂಬೋಡಿಯಾದಲ್ಲಿ ಆಯೋಜಿಸಲಾಗಿದ್ದ ಎಂಟಿಬಿ-2020 ಸೈಕಲ್ ರೇಸ್‌ನಲ್ಲಿ ಭಾಗಿಯಾಗಿದ್ದ ಬಾಲಕನೊಬ್ಬ ಬರಿಗಾಲಿನಲ್ಲೇ ಅದ್ಧೂರಿಯಾಗಿ ಸೈಕ್ಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಕಾಂಬೋಡಿಯಾ ರಾಜಧಾನಿ ಫ್ನಾಮ್ ಪೆನ್‌ನಲ್ಲಿ ಈ ರೇಸ್‌ ಆಯೋಜಿಸಲಾಗಿತ್ತು. ಸರಿಯಾದ ಬ್ರೇಕ್‌ಗಳಿಲ್ಲದ ಹಳೆಯ ಸೈಕಲ್ ಏರಿದ ಈ ಬಾಲಕ ಭಾರೀ ಉತ್ಸಾಹದಿಂದ ರೇಸ್‌ನಲ್ಲಿ ಭಾಗಿಯಾಗಿದ್ದಾನೆ.

ಥೆಯಾರಾ ಹೆಸರಿನ ಈ ಬಾಲಕ ತನ್ನ ತಂದೆ – ತಾಯಿಯೊಂದಿಗೆ ವಾಸವಾಗಿದ್ದು, ಆತನ ಅಪ್ಪ ನಿರ್ಮಾಣ ಕಾರ್ಮಿಕರಾಗಿದ್ದಾರೆ. ತಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಐವರು ಮಕ್ಕಳ ಪೈಕಿ ಥೆಯರಾ ಕಿರಿಯವನಾಗಿದ್ದಾನೆ.

ಹುಡುಗನ ಈ ಉತ್ಸಾಹವನ್ನು ವಿಡಿಯೋದಲ್ಲಿ ಕಂಡ ನೆಟ್ಟಗರು ಆತನಿಗೆ ಶಹಬ್ಬಾಸ್‌ಗಿರಿಯ ಸುರಿಮಳೆಗೈದಿದ್ದಾರೆ. ಇದೇ ವೇಳೆ, ಕಾಂಬೋಡಿಯಾದ ಯುವ ಸಂಘಟನೆಯ ಅಧ್ಯಕ್ಷ ಮೆಂಗ್ ಪೆನ್ಲಾಕ್‌ ಬಾಲಕನಿಗೆ ಹೊಸ ಬೈಸಿಕಲ್‌ ಒಂದನ್ನು ಕೊಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...