ಚೀನಾದ ಸಿನೋವಾಕ್ ಕೋವಿಡ್ 19 ಲಸಿಕೆಯ ತುರ್ತು ಬಳಕೆಗೆ ಕಾಂಬೋಡಿಯಾ ಅಧಿಕೃತ ಅನುಮೋದನೆ ನೀಡಿದೆ ಎಂದು ದೇಶದ ಆರೋಗ್ಯ ಸಚಿವ ಮಾಮ್ ಬುನ್ಹೆಂಗ್ ಮಾಹಿತಿ ನೀಡಿದ್ದಾರೆ.
ಕೊರೊನಾ ರೋಗದ ಭೀಕರತೆಯನ್ನ ಗಮನದಲ್ಲಿ ಇಟ್ಟುಕೊಂಡು ಜನರ ಜೀವ ಹಾಗೂ ಆರೋಗ್ಯವನ್ನ ಕಾಪಾಡುವ ದೃಷ್ಟಿಯಿಂದ ಕಾಂಬೋಡಿಯಾ ಆರೋಗ್ಯ ಸಚಿವಾಲಯವು ಸಿನೋವಾಕ್ ಕೋವಿಡ್ 19 ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ ಎಂದು ಕಾಂಬೋಡಿಯಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸಿನೋವಾಕ್ ಕೋವಿಡ್ 19 ಲಸಿಕೆ ಚೀನಾ ಹಾಗೂ ಇತರೆ ದೇಶಗಳಲ್ಲಿ ಸುರಕ್ಷಿತವಾಗಿ ಬಳಕೆ ಮಾಡಲಾಗಿದೆ. ಹೀಗಾಗಿ ಕಾಂಬೋಡಿಯಾದಲ್ಲೂ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಮಾಮ್ ಬುನ್ಹೆಂಗ್ ಮಾಹಿತಿ ನೀಡಿದ್ದಾರೆ.