ಕ್ಯಾಲಿಫೋರ್ನಿಯಾ: ಜೈಲಿನಲ್ಲಿದ್ದ ವ್ಯಕ್ತಿ ತನ್ನ ಪಾಕ ಪ್ರಾವೀಣ್ಯದಿಂದ ಟಿಕ್ ಟಾಕ್ ಸ್ಟಾರ್ ಆಗಿದ್ದಾನೆ.
18 ವರ್ಷದವನಿದ್ದಾಗಲೇ ಕೊಲೆ ಪ್ರಕರಣವೊಂದರಲ್ಲಿ 70 ವರ್ಷದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸದ್ಯ 31 ವರ್ಷದ ಜರೋನಾ ಕೊಂಬಸ್ ಟಿಕ್ ಟಾಕ್ ನಲ್ಲಿ ಪ್ರಸಿದ್ಧಿ ಪಡೆದಿದ್ದಾನೆ. ಜೈಲಿನಲ್ಲಿರುವ ಸೀಮಿತ ಸೌಲಭ್ಯಗಳ ನಡುವೆ ಅಡುಗೆ ಮಾಡುವುದನ್ನು ಕಲಿತು ಈ ವಿಧಾನವನ್ನು ವ್ಯವಸ್ಥಿತವಾಗಿ ವಿವರಿಸುವುದನ್ನು ಕಲಿತಿದ್ದಾನೆ.
@mrinnocent72x0 ಎಂಬ ಟಿಕ್ ಟಾಕ್ ಪೇಜ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಮುರುಕು ಕುಕ್ಕರ್ , ಹಾಗೂ ಕಬ್ಬಿಣದ ಮಲಗುವ ಮಂಚವನ್ನೇ ಉಪಯೋಗಿಸಿ ಅಡುಗೆ ಮಾಡಿರುವುದು ಕಂಡು ಬರುತ್ತದೆ. ಆತ ಅಡುಗೆ ಮಾಡಿ ಮಹಿಳಾ ಕೈದಿಗಳಿಗೆ ನೀಡುತ್ತಾನೆ.