ಲೈಂಗಿಕ ಕ್ರಿಯೆ ವೇಳೆ ಮಹಿಳೆಯ ಒಪ್ಪಿಗೆಯಿಲ್ಲದೇ ಕಾಂಡೋಮ್ನ್ನು ತೆಗೆದು ಹಾಕಿದ್ರೆ ಅದನ್ನು ಅಪರಾಧ ಎಂದು ಪರಿಗಣಿಸುವ ಹೊಸ ಕಾನೂನನ್ನ ಜಾರಿಗೆ ತರಲು ಕ್ಯಾಲಿಫೋರ್ನಿಯಾ ಮುಂದಾಗಿದೆ.
ಡೆಮಾಕ್ರಟಿಕ್ ಅಸೆಂಬ್ಲಿ ಸದಸ್ಯೆ ಕ್ರಿಸ್ಟಿನಾ ಗಾರ್ಸಿಯಾ ಸೋಮವಾರ ಸದನದಲ್ಲಿ ಈ ಹೊಸ ಕಾನೂನನ್ನ ಪ್ರಸ್ತಾಪ ಮಾಡಿದ್ದಾರೆ. ಈ ಕಾನೂನು ಜಾರಿಗೆ ಬಂದಲ್ಲಿ ಇದು ಲೈಂಗಿಕ ಕಿರುಕುಳ ವಿಭಾಗದಡಿಯಲ್ಲಿ ಬರಲಿದೆ.
ಒಂದು ವೇಳೆ ಈ ಬಿಲ್ ಪಾಸ್ ಆದಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ಪರಸ್ಪರ ಒಪ್ಪಿಗೆಯಿಲ್ಲದೇ ಕಾಂಡೋಮ್ ತೆಗೆಯುವುದು ಕಾನೂನು ಬಾಹಿರ ಎಂದು ಪರಿಗಣನೆಯಾಗಲಿದೆ. ಈ ಮೂಲಕ ಸಂತ್ರಸ್ತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ.
ಭಾರತದಲ್ಲಿ ಅತ್ಯಾಚಾರ ಸಂಬಂಧಿ ಕಾನೂನುಗಳನ್ನ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಪ್ರೊ. ಮೃಣಾಲ್ ಸತೀಶ್ , ಈ ರೀತಿ ಒಪ್ಪಿಗೆ ಇಲ್ಲದೇ ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ತೆಗೆಯೋದನ್ನ ಅತ್ಯಾಚಾರದ ಪ್ರಕರಣದ ಅಡಿಯಲ್ಲೇ ತರಬೇಕು ಎಂದು ಒತ್ತಾಯಿಸಿದ್ದರು. ಆದರೆ ಭಾರತದಲ್ಲಿ ಈ ವಿಚಾರವಾಗಿ ಇನ್ನೂ ಗೊಂದಲ ಮುಂದುವರಿದಿದೆ.