ಕೆನಡಾದ ಒಂಟಾರಿಯೋದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಮನೆಗೆ ನುಗ್ಗಿದ ಕಳ್ಳನೊಬ್ಬ ಏನನ್ನೂ ಕದಿಯದೇ, ಡಿಶ್ ವಾಶರ್ ಮೆಲೆ ಮಲವಿಸರ್ಜನೆ ಮಾಡಿ ಅಲ್ಲಿಂದ ಹೊರಟುಬಿಟ್ಟಿದ್ದಾನೆ.
ಇಲ್ಲಿನ ಸ್ಟಾರ್ವುಡ್ ಡ್ರೈವ್ನ ಈಸ್ಟ್ವೀವ್ ರಸ್ತೆಯಲ್ಲಿರುವ ಈ ಮನೆಯ ಸ್ಲೈಡಿಂಗ್ ಗಾಜಿನ ಬಾಗಿಲು ಲಾಕ್ ಆಗದೇ ಇದ್ದಿದ್ದನ್ನು ಕಂಡ ಈ ಖದೀಮ, ಮನೆಯ ವಾಸಿಗಳೆಲ್ಲಾ ಮಲಗಿದ್ದ ವೇಳೆ ಒಳಗೆ ನುಗ್ಗಿದ್ದಾನೆ. ಪೊಲಿಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಬೆನ್ನಿಗೆ ಸಾರ್ವಜನಿಕರಿಗೆ ಸಂದೇಶ ಕೊಟ್ಟಿರುವ ಪೊಲೀಸರು, ಮನೆಯ ಬಾಗಿಲುಗಳು ಹಾಗೂ ಕಿಟಕಿಗಳನ್ನು ಲಾಕ್ ಮಾಡಿಕೊಂಡು ಇರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.