alex Certify ಕಳ್ಳತನ ಮಾಡುತ್ತಲೇ ನಿದ್ದೆ ಹೋದ ಕಳ್ಳ: ಮುಂದೆ ಆಗಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡುತ್ತಲೇ ನಿದ್ದೆ ಹೋದ ಕಳ್ಳ: ಮುಂದೆ ಆಗಿದ್ದೇನು…?

ಕೆಲಸ ಮಾಡ್ತಾ ಮಾಡ್ತಾ ಆಫೀಸ್​ನಲ್ಲಿ ನಿದ್ದೆ ಮಾಡಿದ್ರೆ ಅಬ್ಬಬ್ಬಾ ಅಂದ್ರೆ ನಿಮ್ಮ ಬಾಸ್​ ನಿಮ್ಮನ್ನ ಕೆಲಸದಿಂದ ಕಿತ್ತು ಹಾಕ್ಬೋದು. ಆದ್ರೆ ಇಲ್ಲೊಬ್ಬ ವ್ಯಕ್ತಿ ನಿದ್ದೆ ಮಾಡಿದ ತಪ್ಪಿಗೆ ಜೈಲು ಪಾಲಾಗಿದ್ದಾನೆ.

ಇಂಗ್ಲೆಂಡ್​ನ ರೆಸ್ಟೋರೆಂಟ್​​ಗೆ ನುಗ್ಗಿದ ಕಳ್ಳನೊಬ್ಬ ಅರ್ಧ ಚೀಸ್​ ತಿಂದ ಬಳಿಕ ನಿದ್ರೆ ಮಾಡಿದ ತಪ್ಪಿಗೆ ಪೊಲೀಸ್​ ಠಾಣೆಯ ಅತಿಥಿಯಾಗಿದ್ದಾನೆ. ಸಂಡರ್​ಲ್ಯಾಂಡ್​ ರೆಸ್ಟೋರೆಂಟ್​ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಬಂಧಿತ ಕಳ್ಳನನ್ನ 41 ವರ್ಷದ ಮಾರ್ಕ್​ ಕೂಪರ್​ ಅಂತಾ ಗುರುತಿಸಲಾಗಿದೆ.

ಬಾರ್​ ಒಳಕ್ಕೆ ನುಗ್ಗಿದ ಕೂಪರ್​​ ಚೀಸ್​ಕೇಕ್​​​​ ಒಂದನ್ನ ತಿಂದಿದ್ದಾನೆ. ಕೂಡಲೇ ಆತ ನಿದ್ದೆ ಹೋಗಿದ್ದು ಪೊಲೀಸರು ಬಂದು ಕಳ್ಳನನ್ನ ಎಬ್ಬಿಸಿದ್ದಾರೆ. ಕೂಡಲೇ ಕೂಪರ್​ ಏನಾಗ್ತಿದೆ ಇಲ್ಲಿ ಅಂತಾ ಕೇಳಿದ್ದಾನೆ. ಅದಕ್ಕೆ ಪೊಲೀಸರು ನೀನು ಒಂದು ಬಾರ್​ನ್ನ ಒಡೆದಿದ್ದೀಯಾ ಅಂತಾ ಉತ್ತರ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

https://www.youtube.com/watch?v=UfS74_huD0w&feature=emb_logo

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...