
ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಎಲೆಕ್ಟ್ರಿಕ್ ಕಾರು ಉತ್ಪಾದಕ ಸಂಸ್ಥೆ ಟೆಸ್ಲಾದ ಗಿಗಾಫ್ಯಾಕ್ಟರಿ ಕ್ಯಾಂಪಸ್‌ನಲ್ಲಿ 10,000 ಹುದ್ದೆಗಳು ಖಾಲಿ ಇವೆ ಎಂದು ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ನ ಸಿಇಓ ಎಲಾನ್ ಮಸ್ಕ್ ಘೋಷಿಸಿದ್ದಾರೆ. 2022ರ ಅಂತ್ಯದ ವೇಳೆ ಇಷ್ಟು ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಮಸ್ಕ್ ತಿಳಿಸಿದ್ದಾರೆ.
“2022ರಲ್ಲೇ ಗಿಗಾ ಟೆಕ್ಸಾಸ್ ಒಂದರಲ್ಲೇ ಕೆಲಸ ಮಾಡಲು 10,000ಕ್ಕೂ ಹೆಚ್ಚು ಜನರು ಬೇಕಾಗಿದ್ದಾರೆ…! ವಿಮಾನ ನಿಲ್ಧಾಣದಿಂದ 5 ನಿಮಿಷಗಳ ಡ್ರೈವ್, ಡೌನ್‌ಟೌನ್‌ನಿಂದ 15 ನಿಮಿಷಗಳ ಡ್ರೈವ್ – ಕೊಲರಾಡೋ ನದಿಯ ದಡದಲ್ಲೇ ಇದೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
“ಹೈಸ್ಕೂಲ್ ಪಾಸಾದವರೇ: ಟೆಸ್ಲಾದಲ್ಲಿ ಕೆಲಸ ಮಾಡಲು ನಿಮ್ಮಲ್ಲಿ ಕಾಲೇಜು ಪದವಿ ಇರಬೇಕೆಂದಿಲ್ಲ. ಹೈಸ್ಕೂಲ್‌ನಿಂದ ನೇರವಾಗಿ ನೀವು ಟೆಸ್ಲಾಗೆ ಕೆಲಸ ಮಾಡಬಹುದಾಗಿದೆ. ಎಂಟ್ರಿ ಮಟ್ಟದಲ್ಲಿ ನಮ್ಮಲ್ಲಿ ಸಾಕಷ್ಟು ಅವಕಾಶಗಳಿದ್ದು, ಉತ್ಪಾದನಾ ಕ್ಷೇತ್ರದ ಹೊರಗಿನವರಾದರೂ ಬದಲಾವಣೆ ತರುವ ಅದಮ್ಯ ಉತ್ಸಾಹವಿದ್ದ ಮಂದಿಗೆ ಆದ್ಯತೆ” ಎಂದು ಆಸ್ಟಿನ್‌ನ ಟೆಸ್ಲಾ ಮಾಲೀಕರ ಸಾಮಾಜಿಕ ಜಾಲತಾಣದ ಹ್ಯಾಂಡಲ್ ಮೂಲಕ ಪೋಸ್ಟ್ ಮಾಡಲಾಗಿದೆ.
ಅಮೆರಿಕಾದಲ್ಲೊಂದು ವಿಶಿಷ್ಟ ವರ್ಚುವಲ್ ಮದುವೆ
ದಾಖಲೆ ಸಂಖ್ಯೆಯ ಡೆಲಿವರಿಗಳ ಬಲದಿಂದ $50 ಶತಕೋಟಿಗಳಷ್ಟು ಮೌಲ್ಯವರ್ಧನೆಯಾಗುವ ಸಾಧ್ಯತೆಯಲ್ಲಿರುವ ಟೆಸ್ಲಾದ ಶೇರುಗಳ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಶೇರುಗಳ ಮೌಲ್ಯದಲ್ಲಿ ಏರಿಕೆಯಾದ ಕಾರಣ ಸಿಇಓ ಮಸ್ಕ್‌ರ ಆಸ್ತಿಯಲ್ಲೂ ಸಹ ಎಂಟು ಪಟ್ಟು ವರ್ಧನೆಯಾಗಿದೆ ಎಂದು ತಿಳಿದುಬಂದಿದೆ.
ಟೊಯೋಟಾ, ಫೋಕ್ಸ್‌ವ್ಯಾಗನ್ ಹಾಗೂ ಜನರಲ್ ಮೋಟರ್ಸ್‌ನ ಕಾಲು ಭಾಗದಷ್ಟು ವಾಹನಗಳನ್ನೂ ಉತ್ಪಾದಿಸದೇ ಇದ್ದರೂ ಸಹ, 2021ರಲ್ಲಿ ಟೆಸ್ಲಾ ಅದಾಗಲೇ 184,000 ವಾಹನಗಳನ್ನು ಡೆಲಿವರ್ ಮಾಡಿದೆ.