ಕೆ 2 ಶಿಖರವನ್ನೇರಿ ಇತಿಹಾಸ ನಿರ್ಮಿಸಿದ ನೇಪಾಳಿ ಪರ್ವತಾರೋಹಿಗಳ ತಂಡ..! 26-01-2021 10:59AM IST / No Comments / Posted In: Latest News, International ನೇಪಾಳದ ಪರ್ವತಾರೋಹಿಗಳ ತಂಡವು ಚಳಿಗಾಲದಲ್ಲಿ ಕೆ 2 ಶಿಖರವನ್ನ ಏರಿದ ಮೊದಲ ಪರ್ವತಾರೋಹಿಗಳ ತಂಡ ಎಂಬ ಇತಿಹಾಸವನ್ನ ನಿರ್ಮಿಸಿದೆ. ಶೆರ್ಪಾಗಳ ಗುಂಪು ಶಿಖರದಿಂದ 70 ಮೀಟರ್ ದೂರದಲ್ಲಿ ನಿಂತು ತಮ್ಮ ಕೊನೆಯ ಹೆಜ್ಜೆಯನ್ನ ಒಟ್ಟಾಗಿ ಇಡುವ ಮೂಲಕ ನೇಪಾಳಿ ರಾಷ್ಟ್ರಗೀತೆಯನ್ನ ಹಾಡಿದ್ದಾರೆ. ಸಹೋದರನಿಗೆ ಸಹೋದರ, ಹೆಗಲಿಗೆ ಹೆಗಲು, ನಾವೆಲ್ಲ ಒಟ್ಟಾಗಿ ಶಿಖರವನ್ನ ಏರುವ ಮೂಲಕ ನೇಪಾಳಿ ರಾಷ್ಟ್ರಗೀತೆಯನ್ನ ಹಾಡಿದ್ದೇವೆ. ಶಿಖರವನ್ನ ತಲುಪಲು ಇನ್ನೇನು 10 ಮೀಟರ್ ಇದೆ ಎನ್ನುವಾಗ ನಾವೆಲ್ಲ ಒಟ್ಟಾಗಿ ಅಂತಿಮ ಹೆಜ್ಜೆ ಇರಿಸಿದೆವು ಎಂದು ಪರ್ವತಾರೋಹಿ ನಿರ್ಮಲ್ ಪುರ್ಜಾ ಟ್ವೀಟ್ ಮಾಡಿದ್ದಾರೆ. Brother to brother, shoulder to shoulder, we walked together to the summit whilst singing the Nepali national anthem. We all stopped around 10m before reaching the summit to huddle and make our final steps together as a team to mark this historical feat .. 1/4 #K2winter pic.twitter.com/P2kCwRy1Vn — Nirmal Purja MBE (@nimsdai) January 24, 2021