ಸಿಯೋಲ್: ದಕ್ಷಿಣ ಕೋರಿಯಾದ ಕೆ-ಪಾಪ್ ಈಗ ವಿಶ್ವ ಪ್ರಸಿದ್ಧ ಬ್ಯಾಂಡ್. ಬ್ಲ್ಯಾಕ್ ಪಿಂಕ್ , ಬಿಗ್ ಬ್ಯಾಂಗ್, ಬಿಟಿಎಸ್ ಮುಂತಾದ ಗಮನ ಸೆಳೆಯುವ ಪ್ರಸಿದ್ಧ ಹಾಡುಗಳನ್ನು ಕೆ-ಪಾಪ್ ನೀಡಿದ್ದು, ಅದು ವಿಶ್ವದ ಮೂಲೆ, ಮೂಲೆ ತಲುಪಿದೆ. ಲಕ್ಷಾಂತರ ವೀಕ್ಷಣೆ ಪಡೆದು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದೆ.
ಬ್ರೆಜಿಲ್ ದೇಶದ ಕೆ-ಪಾಪ್ ನ ಒಬ್ಬ ಅಭಿಮಾನಿ ಇಮ್ಯಾನ್ಯುಯಲ್ ತನ್ನ ಹುಟ್ಟು ಹಬ್ಬಕ್ಕೆ ಅಚ್ಚರಿಯ ಕೊಡುಗೆ ಪಡೆದಿದ್ದರು. ಆಕೆಯ ಅಣ್ಣ ವಿಕ್ಟರ್ ಡಿಸೋಜಾ ಪಾರ್ಟಿಗೆ ವೇದಿಕೆ ಸಿದ್ಧ ಮಾಡುವ ಜವಾಬ್ದಾರಿ ಪಡೆದಿದ್ದ. ತನ್ನ ತಂಗಿಯ ಪ್ರೀತಿಯ ಕೆ- ಪಾಪ್ ಬ್ಯಾಂಡ್ ನ ದೃಶ್ಯಗಳನ್ನು ಅಂಟಿಸಿ ಆತ ಸಿದ್ಧತೆ ಮಾಡಬೇಕಿತ್ತು. ಆದರೆ, ವಿಕ್ಟರ್ ಡಿಸೋಜಾಗೆ ಕೆ-ಪಾಪ್ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಇದರಿಂದ ಒಂದು ಅಪಾಯಕಾರಿ ಉಪಾಯವನ್ನು ಆತ ಆಯ್ದುಕೊಂಡಿದ್ದ.
ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬರ್ತಡೆ ಟೋಪಿ ಹಾಕಿ ನಿಂತ ಫೋಟೋಗಳನ್ನು ಮುದ್ರಿಸಿ ಪಾರ್ಟಿ ನಡೆಯುವ ಕೋಣೆಗೆ ಅಂಟಿಸಿದ್ದ. ಕೇಕ್ ಮೇಲೂ ಕಿಮ್ ಚಿತ್ರ ಇಟ್ಟಿದ್ದ. ಅಣ್ಣನ ತಯಾರಿ ನೋಡಿ ತಂಗಿ ಖುಷ್.
ಅರೆ ಕಿಮ್ ಗೂ ಕೆ-ಪಾಪ್ ಗೂ ಏನು ಸಂಬಂಧ ಎನ್ನುತ್ತೀರಾ…? ವಿಶ್ವಾದ್ಯಂತ ಪ್ರಸಿದ್ಧವಾದ ದಕ್ಷಿಣ ಕೋರಿಯಾದ ಕೆ- ಪಾಪ್ ಪಕ್ಕದ ಉತ್ತರ ಕೋರಿಯಾದಲ್ಲೇ ನಿಷೇಧಕ್ಕೆ ಒಳಗಾಗಿದೆ. ಬ್ಯಾನ್ ಮಾಡಿದ ಮಹಾಶಯನನ್ನೇ ಕೆ-ಪಾಪ್ ಅಭಿಮಾನಿ ಬರ್ತಡೆಗೆ ಕರೆಸಲಾಗಿದೆ ಎಂಬ ಕಲ್ಪನೆಯಲ್ಲಿ ಅಣ್ಣನ ತಯಾರಿಗೆ ತಂಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಲಾಗಿದ್ದು, 70 ಸಾವಿರ ಜನ ಲೈಕ್ ಮಾಡಿದ್ದಾರೆ.
https://www.facebook.com/vitor.desouza.944/posts/2277426345737110