ಬ್ರಿಟನ್ ರಾಣಿಯ ಆದೇಶದಂತೆ, 1960ರಲ್ಲಿ ಜೇಮ್ಸ್ ಬಾಂಡ್ ಹೆಸರಿನ ಸೀಕ್ರೆಟ್ ಸರ್ವೀಸ್ ಏಜೆಂಟ್ ಒಬ್ಬರು ತಮ್ಮ ದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಪೋಲೆಂಡ್ ಜನತೆ ಚಕಿತರಾಗಿದ್ದಾರೆ.
ಪೋಲೆಂಡ್ನ Institute of National Remembrance (IPN) ಶೀತಲ ಸಮರದ ದಿನಗಳ ಕಾಲದ ತನ್ನ ದಾಖಲೆಗಳಲ್ಲಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಅದರ ಪ್ರಕಾರ, ಫೆಬ್ರವರಿ 18, 1964ರಂದು ಪೋಲೆಂಡ್ನಲ್ಲಿ ಜೇಮ್ಸ್ ಬಾಂಡ್ ಕೆಲಸ ಮಾಡುತ್ತಿದ್ದರು ಎಂಬ ಉಲ್ಲೇಖ ಇದೆ. ಪೋಲಿಶ್ ಗುಪ್ತಚರ ಇಲಾಖೆ ಅಧಿಕಾರಿಗಳ ಗಮನಕ್ಕೆ ಆ ಕೂಡಲೇ ಬಾಂಡ್ ಬಂದಿದ್ದರಂತೆ.
“1964 ಹಾಗೂ 1965ರಲ್ಲಿ ಆತ ಪೋಲೆಂಡ್ನಲ್ಲಿದ್ದ ಎಂದು ನಮಗೆ ತಿಳಿದಿದೆ…..ಆತನ ಪಾತ್ರದಲ್ಲಿ ತೋರುವಂತೆ ಬಾಂಡ್ಗೆ ಮಹಿಳೆಯರ ಮೇಲೆ ಮೋಹವಿತ್ತು ಹಾಗೂ ಆತ ಪೋಲೆಂಡ್ನ ಸುತ್ತ ಸಂಚರಿಸುತ್ತಿದ್ದ. ಆತ ಇಲ್ಲಿನ ಮಿಲಿಟರಿ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಲು ನೋಡುತ್ತಿದ್ದ” ಎಂದು IPN ಆರ್ಕೈವ್ನ ಮರ್ಝೆನಾ ಕರ್ಕ್ ತಿಳಿಸಿದ್ದಾರೆ.