alex Certify ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ ಕೊರೊನಾ ಪರಿಣಾಮದ ವರದಿ: ಗುಣಮುಖರಾದ್ರೂ ನರ, ಬ್ರೈನ್ ಡ್ಯಾಮೇಜ್ ಸೇರಿ ಹಲವು ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ ಕೊರೊನಾ ಪರಿಣಾಮದ ವರದಿ: ಗುಣಮುಖರಾದ್ರೂ ನರ, ಬ್ರೈನ್ ಡ್ಯಾಮೇಜ್ ಸೇರಿ ಹಲವು ಸಮಸ್ಯೆ

ಲಂಡನ್: ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಟ ತಪ್ಪುವುದಿಲ್ಲ. ಕೊರೊನಾ ಸೋಂಕು ಮಿದುಳಿನ ಜೀವತಂತು, ನರಕೋಶ ನಾಶಪಡಿಸುತ್ತದೆ. ಕೊರೊನಾ ಸೋಂಕಿನಿಂದ ಸದ್ಯಕ್ಕೆ ಗುಣಮುಖರಾದರೂ, ದೀರ್ಘಕಾಲದ ನಂತರ ನರ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಜರ್ನಲ್ ಬ್ರೇನ್ ಪತ್ರಿಕೆಯಲ್ಲಿ ಈ ಕುರಿತಾದ ಅಧ್ಯಯನ ವರದಿ ಪ್ರಕಟವಾಗಿದೆ. ಲಂಡನ್ ವಿಶ್ವವಿದ್ಯಾಲಯ ಕಾಲೇಜ್ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಗಳಲ್ಲಿ ಅಧ್ಯಯನ ನಡೆಸಲಾಗಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರವೂ ನರಕೋಶಗಳ ಉರಿಯೂತ, ಭಾವೋದ್ರೇಕ, ಮಾನಸಿಕ ವಿಕಾರ ಸಮಸ್ಯೆ ಕಾಣಿಸಿಕೊಳ್ಳಲಿದೆ.

43 ಕೊರೊನಾ ಸೋಂಕಿತರ ಮೇಲೆ ತಜ್ಞರಿಂದ ಅಧ್ಯಯನ ನಡೆಸಲಾಗಿದ್ದು, ಈಗಾಗಲೇ 9 ಮಂದಿಯಲ್ಲಿ ನರರೋಗ ಸಮಸ್ಯೆ ಪತ್ತೆಯಾಗಿದೆ. ಗುಣಮುಖರಾಗಿದ್ದ ಕೆಲವರಲ್ಲಿ ಮಿದುಳು ನಿಷ್ಕ್ರಿಯವಾಗಿದೆ ಎಂದು ಅಧ್ಯಯನ ವರದಿಯಲ್ಲಿ ಗೊತ್ತಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...