ರಸ್ತೆ ಸುರಕ್ಷತೆ ಉಲ್ಲಂಘನೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಬ್ರಿಟಿಷ್ ನಾಗರಿಕನನ್ನ ಸ್ಪೇನ್ ಮಾರ್ಬೆಲ್ಲಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರ್ಟಿ ಎಂದು ಗುರುತಿಸಲಾದ 27 ವರ್ಷದ ಬ್ರಿಟಿಷ್ ಇನ್ಸ್ಟಾಗ್ರಾಮರ್ ವಿರುದ್ಧ ರಸ್ತೆ ಸುರಕ್ಷತೆ ಉಲ್ಲಂಘನೆ, ಪರಿಸರಕ್ಕೆ ಹಾನಿ, ಕಾರನ್ನ ನದಿಗೆ ತಳ್ಳಿದ ಆರೋಪ ಸೇರಿದಂತೆ ಅನೇಕ ದೂರುಗಳು ದಾಖಲಾಗಿದೆ.
ಕುಚೇಷ್ಟೆ ವ್ಯಕ್ತಿತ್ವದ ವ್ಯಕ್ತಿಯಾಗಿರುವ ಬ್ರಿಟಿಷ್ ಇನ್ಸ್ಟಾಗ್ರಾಮರ್ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ವಿಡಿಯೋಗಳನ್ನ ಪೋಸ್ಟ್ ಮಾಡಿದ ಬಳಿಕ ಮಾರ್ಬೆಲ್ಲಾ ಪೊಲೀಸರು ಆತನನ್ನ ಬಂಧಿಸಿದ್ದಾರೆ.
ಈತನ ಒಂದು ವಿಡಿಯೋದಲ್ಲಿ ಸ್ಯಾನ್ ಪೆಡ್ರೋದ ಪುರಸಭೆ ಕ್ರೀಡಾಂಗಣದ ಮೇಲಿರುವ ಗ್ವಾಡಾಜಿಯಾ ನದಿಗೆ ಕಾರನ್ನ ತಳ್ಳುವುದನ್ನ ಕಾಣಬಹುದಾಗಿದೆ.
ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ ಕಪ್ಪು ಬಣ್ಣದ ಬಿಎಂಡಬ್ಲೂ ಕಾರನ್ನ ನದಿಗೆ ಬೀಳಿಸುತ್ತಿರೋದನ್ನ ನೋಡಬಹುದಾಗಿದೆ. ನಾಲ್ವರಲ್ಲಿ ಒಬ್ಬ ಕಾರನ್ನ ಬೀಳಿಸೋಕೂ ಮುನ್ನ ಅದರ ಪರವಾನಿಗಿ ಫಲಕಗಳನ್ನ ಕಿತ್ತಿದ್ದಾನೆ. ಸದ್ಯ ನದಿಯಿಂದ ಕಾರನ್ನ ಎತ್ತಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಹಾಗೂ ಆರ್ಟಿ ಎಂಬಾತನನ್ನ ನವೆಂಬರ್ 23ರಂದು ಬಂಧಿಸಿದ್ದಾರೆ.