alex Certify ʼಇಡ್ಲಿʼ ಎಂದರೆ ಬಲು ಬೋರು ಎಂದವನಿಗೆ ಹಿಗ್ಗಾಮುಗ್ಗಾ ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಡ್ಲಿʼ ಎಂದರೆ ಬಲು ಬೋರು ಎಂದವನಿಗೆ ಹಿಗ್ಗಾಮುಗ್ಗಾ ತರಾಟೆ

ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಒಂದು ವಿಚಾರ ಭಾರೀ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ.

ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್‌ ಹೊಡೆಸುವ ತಿನಿಸು ಎಂದಿದ್ದು, ದೇಸೀ ಟ್ವಿಟ್ಟಿಗರಿಗೆ ಅಸಹನೆಗೆ ಕಾರಣವಾಗಿದೆ. ಈ ಘಟನೆಯೀಗ ಇಡ್ಲಿ ಗೇಟ್ ಎಂದೇ ಸದ್ದು ಮಾಡುತ್ತಿದೆ.

ಆನ್ಲೈನ್ ಫುಡ್ ಡೆಲಿವರಿ ದಿಗ್ಗಜ ಝೊಮ್ಯಾಟೋ ಇತ್ತೀಚೆಗೆ ತನ್ನ ಫಾಲೋವರ್‌ಗಳನ್ನು, “ಯಾವ ತಿನಿಸನ್ನು ಜನ ಏಕೆ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ” ಎಂದು ಕೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಬ್ರಿಟಿಷ್‌ ಮೂಲದ ಇತಿಹಾಸ ಪ್ರಾಧ್ಯಾಪಕ ಹಾಗೂ ಭಾರತ-ಬ್ರಿಟನ್‌ ಅಧ್ಯಯನದ ತಜ್ಞ ಎಡ್ವರ್ಡ್ ಆಂಡರ್ಸನ್‌, “ಜಗತ್ತಿನಲ್ಲೇ ಅತ್ಯಂತ ಬೋರಿಂಗ್ ತಿನಿಸೆಂದರೆ ಇಡ್ಲಿ” ಎಂದಿದ್ದಾರೆ. ಈ ವಿಚಾರದ ದಕ್ಷಿಣ ಭಾರತೀಯರಿಗೆಲ್ಲಾ ಭಾರೀ ಅಸಹನೆ ತಂದಿದ್ದು, ಟ್ವಿಟ್ಟರ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ವಿಷಯ ಸಂಸದ ಶಶಿ ತರೂರ್‌ ತನಕ ಮುಟ್ಟಿದೆ. “ನಾಗರೀಕತೆ ಎನ್ನುವುದನ್ನು ಕಲಿಯುವುದು  ಕಷ್ಟ. ಇಡ್ಲಿಯ ರುಚಿ ಹಿಡಿಯುವುದು, ಕ್ರಿಕೆಟ್ ಎಂಜಾಯ್ ಮಾಡುವುದು ಹೇಗೆಂದು ಪ್ರತಿಯೊಬ್ಬ ಮಾನವನಿಗೂ ಬರುವುದಿಲ್ಲ. ಈ ಬಡ ಮನುಷ್ಯನನ್ನು ನೋಡಿದರೆ ಅಯ್ಯೋ ಎನಿಸುತ್ತದೆ, ಆತನಿಗೆ ಜೀವನವೆಂದರೇನೆಂದು ಅರ್ಥವಾಗುವುದೇ ಇಲ್ಲ ಎನಿಸುತ್ತದೆ” ಎಂದಿದ್ದಾರೆ.

ವಿಚಾರ ಏಕೋ ಮಿತಿ ಮೀರುತ್ತಿದೆ ಎಂದರಿತಂತೆ ಕಾಣುವ ಎಡ್ವರ್ಡ್ ಕೂಡಲೇ ತಮ್ಮ ಮಾತಿಗೆ ಇನ್ನಷ್ಟು ಸ್ಪಷ್ಟನೆ ಕೊಟ್ಟು,”ದಕ್ಷಿಣ ಭಾರತೀಯರೆಲ್ಲಾ ನನ್ನ ಮೇಲೆ ದಾಳಿ ಮಾಡುವ ಮುನ್ನ ದಯವಿಟ್ಟು ಈ ವಿಷಯ ತಿಳಿಯಿರಿ, ದೋಸೆ ಮತ್ತು ಅಪ್ಪಂ ಎಂದರೆ ನನಗೆ ಇಷ್ಟವಾಗುತ್ತದೆ. ಆದರೆ ಇಡ್ಲಿ ಹಾಗೂ ಪುಟ್ಟು ಎಂದರೆ ಸಹಿಸುವುದು ಕಷ್ಟ” ಎಂದಿದ್ದಾರೆ.

https://twitter.com/PonnathPuraaNa/status/1314086246805766146?ref_src=twsrc%5Etfw%7Ctwcamp%5Etweetembed%7Ctwterm%5E1314086246805766146%7Ctwgr%5Eshare_0&ref_url=https%3A%2F%2Fwww.timesnownews.com%2Fthe-buzz%2Farticle%2Fbritish-professor-calls-idli-boring-youve-made-a-grave-error-that-will-haunt-you-for-life-say-netizens%2F664234

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...