ನಮಗೆ ಬೇಕಾದ ವಸ್ತುಗಳನ್ನ ಮನೆ ಬಾಗಿಲಿಗೇ ತಂದು ಮುಟ್ಟಿಸುವ ಆನ್ಲೈನ್ ಮಾರುಕಟ್ಟೆಗಳು ಕೊರೊನಾ ಬಳಿಕ ಮತ್ತಷ್ಟು ಗ್ರಾಹಕ ಸ್ನೇಹಿ ಸೇವೆಗಳ ಮೂಲಕ ಜನಪ್ರಿಯವಾಗುತ್ತಿವೆ . ಆದರೆ ಈ ಆನ್ಲೈನ್ ಮಾರುಕಟ್ಟೆಗಳು ಎಲ್ಲವೂ ನಂಬಿಕಸ್ಥ ಎನ್ನಲಾಗಲ್ಲ.
ಒಳ್ಳೆಯ ಪ್ರಾಡಕ್ಟ್ ಕೊಡುತ್ತೇವೆ ಎಂದು ನಂಬಿಸಿ ಹಣ ತೆಗೆದುಕೊಂಡು ಕಲ್ಲು ಇಲ್ಲವೇ ಉಪಯೋಗಕ್ಕೆ ಬಾರದ ವಸ್ತುಗಳನ್ನ ಕೊಟ್ಟ ಪ್ರಕರಣಗಳೂ ನಮ್ಮಲ್ಲಿವೆ.
ಇದೇ ರೀತಿ ಕ್ರಿಸ್ಮಸ್ ಹಬ್ಬಕ್ಕೆ ಅಲಂಕಾರಿಕ ವಸ್ತು ಬೇಕು ಎಂದು ಅಮೆಜಾನ್ನಲ್ಲಿ ಆರ್ಡರ್ ಮಾಡಿದ್ದ ದಂಪತಿ ಮನೆ ಬಾಗಿಲಿಗೆ ಬಂದ ವಸ್ತುವನ್ನ ಕಂಡು ಹೌಹಾರಿದ್ದಾರೆ.
ಮಾರ್ಕ್ ಹಾಗೂ ಜೆಮ್ಮಾ ಸ್ಮಿತ್ ಮನೆಗೆ ಬಂದ ಪಾರ್ಸೆಲ್ನಲ್ಲಿ ಅಲಂಕಾರಿಕ ವಸ್ತುಗಳ ಜಾಗದಲ್ಲಿ ದೊಡ್ಡ ಜೇಡರ ಹುಳು ಇತ್ತು. ಇದನ್ನ ನೋಡಿದ ಜೆಮ್ಮಾ ಬಾಕ್ಸ್ನ್ನ ಅಲ್ಲೇ ಬಿಸಾಡಿದ್ದಾರೆ.
ಇದಾದ ಬಳಿಕ ಜೇಡರ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಮಾರ್ಕ್ ಇದು ಯಾವ ಜಾತಿಯ ಜೇಡ ಎಂದು ಪ್ರಶ್ನೆ ಮಾಡಿದ್ದಾರೆ.