
ಮದುವೆ ಕಾರ್ಯಕ್ರಮವೊಂದರಲ್ಲಿ ಬಾಣಸಿಗಳಾಗಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ತಮಗಾದ ವಿಚಿತ್ರ ಅನುಭವವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಆಕೆ ತಾನು ಮದುವೆ ಕಾರ್ಯಕ್ರಮದಲ್ಲಿ ಬಹುದೊಡ್ಡ ತಪ್ಪು ಮಾಡಿದೆ ಎಂದು ಪಶ್ಚಾತಾಪ ಪಡೋಕೆ ಮುನ್ನವೇ ಮದುಮಗಳಿಂದ ಬಹುಮಾನವನ್ನ ಪಡೆದುಕೊಂಡಿದ್ದಾಳೆ.
ಟಿಕ್ಟಾಕ್ ಬಳಕೆದಾರರಾದ ಕ್ಲೋ ಎಂಬವರು ಈ ಘಟನೆಯನ್ನ ಹಂಚಿಕೊಂಡಿದ್ದಾರೆ. ಇದೇ ಮೊದಲ ಕಾರ್ಯಕ್ರಮದಲ್ಲಿ ನಾನು ಬಾಣಸಿಗಳಾಗಿ ಕೆಲಸ ಮಾಡಿದ್ದೆ. ಈ ಕಾರ್ಯಕ್ರಮದಲ್ಲಿ ನಾನು ಸಾಂಬಾರ್ನ್ನು ಮದುಮಗಳ ಅತ್ತೆಯ ಉಡುಪಿನ ಮೇಲೆ ಚೆಲ್ಲಿ ಹಾಕಿದ್ದೆ ಎಂದು ಹೇಳಿದ್ದಾರೆ.
ಈ ಸಾಂಬಾರು ತುಂಬಾನೇ ಬಿಸಿಯಾಗಿತ್ತು. ಆದರೆ ದೇವರ ದಯೆಯಿಂದ ಆಕೆ ಮೈ ಸುಟ್ಟು ಹೋಗಲಿಲ್ಲ. ಆಕೆ ಮನೆಗೆ ಹೋಗಿ ಉಡುಪನ್ನ ಬದಲಾಯಿಸಿಕೊಂಡು ಬರಬೇಕಾಯ್ತು. ನನ್ನ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಒಳ್ಳೆಯ ಕ್ಷಣವನ್ನ ಹಾಳು ಮಾಡಿದೆ ಎಂದು ನಾನು ಪಶ್ಚಾತಾಪ ಪಡುತ್ತಿದ್ದೆ. ಆದರೆ ನಂತರ ನಡೆದ ಘಟನೆಯಿಂದ ನೆರೆದಿದ್ದವರೆಲ್ಲ ಆಶ್ಚರ್ಯ ಚಕಿತರಾದ್ರು.
ಮದುಮಗಳು ಸೀದಾ ನನ್ನ ಬಳಿ ಬಂದು ನನ್ನ ಕೈಯನ್ನ ಹಿಡಿದು ಧನ್ಯವಾದ ಅರ್ಪಿಸಿದಳು. ನನ್ನ ಅತ್ತೆ ನನ್ನ ಮದುವೆ ಕಾರ್ಯಕ್ರಮದಂದು ಶ್ವೇತ ವರ್ಣದ ಬಟ್ಟೆ ಧರಿಸಬಾರದಿತ್ತು ಎಂದು ಹೇಳಿ ನನಗೆ 55 ಪೌಂಡ್ ಹಣವನ್ನ ಬಹುಮಾನದ ರೂಪದಲ್ಲಿ ನೀಡಿದಳು.
ನಾವಿಬ್ಬರು ಈಗಲೂ ಪೇಟೆಯಲ್ಲಿ ಒಬ್ಬರಿಗೊಬ್ಬರು ಎದುರಾಗುತ್ತೇವೆ. ಆಕೆ ನನಗೆ ಈಗಲೂ ಹಾಯ್ ಎಂದು ಹೇಳುತ್ತಾಳೆ ಅಂತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು 1.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.