ನಿಶ್ಚಿತ ವರ ತನ್ನೊಂದಿಗೆ ಹೊರಗೆ ಸುತ್ತಾಡಲು ಹೋಗುವಂತೆ ಮಾಡಲು ತಾಯಿ ಆತನಿಗೆ ಹಣ ನೀಡಿದ್ದಾಳೆ ಎಂದು ತಿಳಿದು ಬಂದ ಬಳಿಕ ಪುತ್ರಿ ಈ ಮದುವೆಯನ್ನ ಕ್ಯಾನ್ಸಲ್ ಮಾಡಿದ್ದಾಳೆ.
ಇದೆಲ್ಲವೂ ತುಂಬ ವೇಗವಾಗಿ ನಡೆದುಹೋಯ್ತು. ಆತ ನನ್ನ ಮುಂದೆ ವಜ್ರದ ಉಂಗುರವನ್ನ ಹಿಡಿದು ಪ್ರಪೋಸ್ ಮಾಡಿದ್ದ. ನಾನು ಸಹ ಇದಕ್ಕೆ ಒಪ್ಪಿಕೊಂಡಿದ್ದೆ. ನನ್ನ ಬಳಿ ಕಳೆದುಕೊಳ್ಳುವಂತದ್ದು ಏನೂ ಇಲ್ಲ ಎಂದು ಯುವತಿ ಹೇಳಿದ್ದಾಳೆ. ಅಲ್ಲದೇ ನಿಶ್ಚಿತ ವರ ಆದಷ್ಟು ಬೇಗ ಮದುವೆಯಾಗೋಣ ಎಂದೂ ಹೇಳಿದ್ದನಂತೆ.
ಮದುವೆ ಸುದ್ದಿ ಕೇಳುತ್ತಿದ್ದಂತೆಯೇ ನನ್ನ ತಾಯಿ ಬಹಳವೇ ಸಂತೋಷಗೊಂಡಿದ್ದಳು, ಆದರೆ ಈ ಸಂತೋಷ ಹೆಚ್ಚು ದಿನ ಹೀಗೆಯೇ ಇರಲಿಲ್ಲ.
ನನ್ನ ತಾಯಿ ನನಗಾಗಿ ಅತ್ಯಂತ ದುಬಾರಿ ಬೆಲೆ ಉಡುಪನ್ನ ತಂದಿದ್ದರು. ಅದು ಮಾತ್ರವಲ್ಲದೇ ನನ್ನ ಪೋಷಕರೇ ಎಲ್ಲಾ ಖರ್ಚನ್ನ ನೋಡಿಕೊಂಡಿದ್ದರು. ಆತನ ಪೋಷಕರು ಏಕೆ ಖರ್ಚು ಮಾಡೋದಿಲ್ಲ ಎಂದು ನನ್ನ ಪೋಷಕರ ಬಳಿ ನಾನು ಪ್ರಶ್ನೆ ಮಾಡುತ್ತಲೇ ಇದ್ದೆ. ಆದರೆ ಪೋಷಕರು ಇದರ ಬಗ್ಗೆ ಏನನ್ನೂ ಹೇಳಲಿಲ್ಲ. ನಿಶ್ಚಿತ ವರ ನನ್ನ ಪೋಷಕರು ಬಡವರು ಎಂದು ನನ್ನ ಬಳಿ ಹೇಳಿದ್ದ.
ಆತ ಬಡ ಕುಟುಂಬದವನೇ ಆಗಿದ್ದರೆ ಅಷ್ಟು ಬೆಲೆಬಾಳುವ ವಜ್ರದ ಉಂಗುರ ಹೇಗೆ ತಂದ ಎಂಬ ಪ್ರಶ್ನೆ ನನ್ನನ್ನ ಕಾಡಲು ಆರಂಭಿಸಿತು. ಇದಾದ ಬಳಿಕ ನಾನು ಈ ಪ್ರಕರಣವನ್ನ ಭೇದಿಸಲು ಆರಂಭಿಸಿದೆ. ವಜ್ರ ಖರೀದಿ ಮಾಡಿದ ಅಂಗಡಿಗೆ ತೆರಳಿ ಅದರ ಬೆಲೆ ಎಷ್ಟೆಂದು ತಿಳಿಯಲು ನಾನು ಪ್ರಯತ್ನಿಸಿದೆ. ಅಲ್ಲಿ ನನಗೆ ಈ ಉಂಗುರವನ್ನ ಖರೀದಿ ಮಾಡಿದ್ದು ನಿಶ್ಚಿತ ವರನಲ್ಲ. ಬದಲಾಗಿ ಅದನ್ನ ಖರೀದಿ ಮಾಡಿದ್ದು ನನ್ನ ತಾಯಿ ಎಂಬ ವಿಚಾರ ನನ್ನ ಗಮನಕ್ಕೆ ಬಂದಿತು.
ಇಷ್ಟು ಮಾತ್ರವಲ್ಲ. ಆ ಉಂಗುರವನ್ನ ನನ್ನ ತಾಯಿ ನಿಶ್ಚಿತ ವರ ನನ್ನೆದುರು ಪ್ರೇಮ ನಿವೇದನೆ ಮಾಡುವ ಒಂದು ತಿಂಗಳ ಮುನ್ನವೇ ಖರೀದಿ ಮಾಡಿದ್ದರು. ಇದಾದ ಬಳಿಕ ನನ್ನ ತಾಯಿ ಆತನಿಗೆ ಈ ಎಲ್ಲಾ ಕೆಲಸಗಳನ್ನ ಮಾಡಲು ಹಣ ನೀಡಿದ್ದಳು ಎಂದು ತಿಳಿದುಬಂದಿದೆ. ಅಲ್ಲದೇ ಆತ ಮದುವೆಯನ್ನ ಹಣಕ್ಕಾಗಿ ಆಗುತ್ತಿದ್ದ ಎಂಬುದೂ ನನಗೆ ತಿಳಿಯಿತು ಎಂದು ಯುವತಿ ವಿವರಿಸಿದ್ದಾಳೆ. ಯುವತಿ ದ್ವಿಲಿಂಗಿ ಆಗಿದ್ದ ಕಾರಣ ಅದನ್ನ ತಪ್ಪಿಸಲು ಹಾಗೂ ಸಾಮಾನ್ಯರಂತೆಯೇ ಪುರುಷರೊಂದಿಗೆ ಮದುವೆ ಮಾಡಲು ತಾಯಿ ಇದನ್ನೆಲ್ಲಾ ಮಾಡಿದ್ದಾರೆ ಎಂದು ತಿಳಿದುಬಂದಿದೆ.