alex Certify ಒಪ್ಪಿಗೆ ಪಡೆಯದೆ ಬರೋಬ್ಬರಿ 5 ಮಿಲಿಯನ್​ ಡಾಲರ್​ ಎಸ್ಟೇಟ್​ನಲ್ಲಿ ಮದುವೆ ಆಯೋಜಿಸಿದ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಪ್ಪಿಗೆ ಪಡೆಯದೆ ಬರೋಬ್ಬರಿ 5 ಮಿಲಿಯನ್​ ಡಾಲರ್​ ಎಸ್ಟೇಟ್​ನಲ್ಲಿ ಮದುವೆ ಆಯೋಜಿಸಿದ ಜೋಡಿ

ಫ್ಲೋರಿಡಾದ ಜೋಡಿಯೊಂದು ತಮ್ಮ ಮದುವೆಗೆ ಅದ್ಧೂರಿ ಕಾರ್ಯಕ್ರಮವನ್ನ ಪ್ಲಾನ್​ ಮಾಡಿತ್ತು. ಆದರೆ ಆಶ್ಚರ್ಯಕರ ವಿಚಾರ ಏನು ಅಂದರೆ ಈ ವಿಶೇಷ ದಿನಕ್ಕಾಗಿ ಅವರು ಯಾವುದೇ ಸ್ಥಳವನ್ನ ಬುಕ್​ ಮಾಡಿರಲಿಲ್ಲ. ಕರ್ಟ್ನಿ ವಿಲ್ಸನ್ ಹಾಗೂ ಶೆನಿತಾ ಜೋನ್ಸ್ ತಮ್ಮ ಅದ್ದೂರಿ ವಿವಾಹಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಆಹ್ವಾನ ನೀಡಿದ್ದರು.

16300 ಚದರ ಅಡಿ ಫೋರ್ಟ್​ ಲ್ಯಾಡರ್​ ಡೇಲ್​ ಎಸ್ಟೇಟ್​​ನಲ್ಲಿ ವಿವಾಹ ಆಯೋಜಿಸಿದ್ದ ದಂಪತಿ ಇಲ್ಲಿಗೆ ಆತ್ಮೀಯರನ್ನ ಆಹ್ವಾನಿಸಿದ್ರು. ಈ ಎಸ್ಟೇಟ್​ನಲ್ಲಿ ಈಜುಕೊಳ, ಟೆನ್ನಿಸ್ ಕೋರ್ಟ್, ಹಾಟ್​​ ಟಬ್​ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳಿದ್ದವು.

ಅತಿಥಿಗಳನ್ನುದ್ದೇಶಿಸಿ ಮಾತನಾಡಿದ ವಿಲ್ಸನ್​​​ ತಮ್ಮ ಜೀವನದ ಪ್ರೀತಿ ಪಾತ್ರಳನ್ನ ವಿವಾಹವಾಗಿದ್ದು ದೇವರ ಪ್ಲಾನ್​ ಎಂದಿದ್ದಾರೆ. ಆದರೆ ಅಚ್ಚರಿಯ ವಿಚಾರ ಅಂದರೆ ಈ ಎಸ್ಟೇಟ್​​ನ ಮಾಲೀಕನಿಗೆ ಈ ಮದುವೆಯ ಬಗ್ಗೆ ಮಾಹಿತಿಯನ್ನೇ ನೀಡಿರಲಿಲ್ಲ.

ಈ ಅದ್ಧೂರಿ ಕಾರ್ಯಕ್ರಮವನ್ನ ನೋಡಿ ಶಾಕ್​ಗೊಳಗಾದ ಎಸ್ಟೇಟ್​ ಮಾಲೀಕ ಫಿಂಕೆಲ್​ ಪೊಲೀಸರಿಗೆ ಕರೆ ಮಾಡಿದ್ದಾರೆ. ನನ್ನ ಜಾಗವನ್ನ ಯಾರೋ ಅತಿಕ್ರಮಣ ಮಾಡಿದ್ದಾರೆ. ಅಲ್ಲದೇ ಅವರು ನನಗೆ ಹಿಂಸೆಯನ್ನ ನೀಡುತ್ತಲೇ ಇದ್ದಾರೆ. ದೇವರ ಪ್ಲಾನ್​ನಂತೆ ಇಲ್ಲಿ ಮದುವೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಏನು ನಡೀತಾ ಇದೆ ಅನ್ನೋದೇ ನನಗೆ ತಿಳಿದಿಲ್ಲ. ನನಗೆ ಈ ಕಾರ್ಯಕ್ರಮವನ್ನ ಬಂದ್​ ಮಾಡಿಸಬೇಕು ಅಷ್ಟೇ. ಅವರು ನನ್ನ ಆಸ್ತಿಯ ಮೇಲೆ ಕುಳಿತಿದ್ದಾರೆ ಎಂದು ಪೊಲೀಸರಿಗೆ ದೂರನ್ನ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಇಬ್ಬರು ಪೊಲೀಸ್​ ಅಧಿಕಾರಿಗಳು ಆಗಮಿಸಿದ್ದಾರೆ. ಅಲ್ಲದೇ ಮದುವೆಗೆಂದು ನೆರೆದವರಿಗೆ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಹೇಳಿದ್ದಾರೆ. ಹಾಗೂ ಈ ಘಟನೆ ಸಂಬಂಧ ದಂಪತಿಗೆ ಯಾವುದೇ ದಂಡವನ್ನ ಹಾಕಿಲ್ಲ.

ಫಿಂಕೆಲ್​ ಎರಡು ವರ್ಷಗಳಿಂದ ಈ ಭವನವನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದರು ಹಾಗೂ ಈ ಎಸ್ಟೇಟ್​ಗೆ 5.7 ಮಿಲಿಯನ್​ ಡಾಲರ್​ ನಿಗದಿ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ವಿಲ್ಸನ್​ ಕೂಡ ಸಂಭಾವ್ಯ ಖರೀದಿದಾರರಾಗಿ ಈ ಎಸ್ಟೇಟ್​ಗೆ ಬಂದಿದ್ದ. ಈ ವೇಳೆ ಈ ಐಶಾರಾಮಿ ಎಸ್ಟೇಟ್​​​ನ್ನು ನೋಡಿದ್ದರು. ಇಲ್ಲಿ ಮದುವೆಗೆ ಅನುಮತಿಯನ್ನೇ ಪಡೆಯದ ಈ ದಂಪತಿ ಆಮಂತ್ರಣ ಪತ್ರಿಕೆಯಲ್ಲಿ ಈ ಭವನದ ವಿಳಾಸವನ್ನ ಮುದ್ರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...