ತನ್ನ ಬ್ರಾಂಡ್‌ನ ಬಿಯರ್ ಒಂದಕ್ಕೆ ಗುಪ್ತಾಂಗದ ರೋಮದ ಅರ್ಥ ಬರುವ ಹೆಸರಿಟ್ಟಿರುವ ಕಾರಣಕ್ಕೆ ಕೆನಡಾದ ಹೆಲ್ಸ್ ಬೇಸ್‌ಮೆಂಟ್ ಬ್ರಿವರಿ ಕ್ಷಮೆ ಯಾಚಿಸಿದೆ. ನ್ಯೂಜಿಲೆಂಡ್‌ನ ಮಾವೋರಿ ಭಾಷೆಯ ’ಹುರುಹುರು’ ಎಂಬ ಶಬ್ದವನ್ನು ಬಿಯರ್ ಹೆಸರಿಗೆ ಇಡಲು ಎರಡು ವರ್ಷಗಳ ಹಿಂದೆ ಪರಿಗಣಿಸಿತ್ತು.
ಮಾವೋರಿ ಭಾಷೆಯ ಮೇಲ್ಕಂಡ ಪದಕ್ಕೆ ’ರೆಕ್ಕೆ’ ಎಂಬ ಅರ್ಥ ಬರುತ್ತದೆ ಎಂದು ಈ ಕಂಪನಿ ತಿಳಿದುಕೊಂಡಿತ್ತು. ಆದರೆ. ಮಾವೋರಿ ಭಾಷೆಯಲ್ಲಿ ಟಿವಿ ಪ್ರೆಸೆಂಟೇಷನ್ ಕೊಡುತ್ತಾ ಬಂದಿರುವ ಟೆ ಹಮುವಾ, ನಿಕೋರಾ, “ಹುರುಹುರು” ಪದವನ್ನು ಟೆ ರೊಯೋ ಮಾವೋರಿ ಭಾಷೆಯಲ್ಲಿ ಗುಪ್ತಾಂಗದ ರೋಮ ಎಂದು ಹೇಳಲು ಬಯಸುತ್ತಾರೆ ಎಂದಿದ್ದಾರೆ.
ಈ ಬಗ್ಗೆ ಕ್ಷಮೆ ಯಾಚಿಸಿರುವ ಬ್ರಿವರಿಯ ಸಂಸ್ಥಾಪಕ ಮೈಕ್ ಪಟ್ರಿಕಿನ್, “ಮಾವೋರಿ ಜನ ಅಥವಾ ಸಂಸ್ಕೃತಿಗೆ ಅವಮಾನ ಮಾಡಬೇಕಂಬ ಉದ್ದೇಶ ನಮ್ಮದಾಗಿರಲಿಲ್ಲ; ಯಾರಿಗೆಲ್ಲಾ ಇದರಿಂದ ಅವಮಾನವಾಗಿದೆ ಎನಿಸುತ್ತದೋ ಅವರಿಗೆ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿದ್ದಾರೆ.