ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್) ಭುವಿಯನ್ನು ಸೆರೆ ಹಿಡಿದ ಆಕರ್ಷಕ ಫೋಟೋಗಳನ್ನು ಪ್ರಕಟಿಸಿದೆ. ಇದನ್ನು ಕಂಡ ನೆಟ್ಟಿಗರು ಆಶ್ಚರ್ಯ ಚಕಿತ ಅಭಿಪ್ರಾಯ ನೀಡಿದ್ದಾರೆ.
ಐಎಸ್ಎಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡ್‌ನಲ್ಲಿ ಹಂಚಿಕೊಳ್ಳಲಾದ ಇತ್ತೀಚಿನ ಚಿತ್ರಗಳ ಸರಣಿಯಲ್ಲಿ, ನಗರದ ದೀಪಗಳ ಬೆಳಕು ಮತ್ತು ನಕ್ಷತ್ರಗಳನ್ನು ಒಟ್ಟಿಗೆ ಸೆರೆ ಹಿಡಿದು ಭೂಮಿಯ ಉದಯವನ್ನು ತೋರಿಸುತ್ತದೆ.
ವಿಶ್ವದ ನಂಬರ್ 1 ಸಾಫ್ಟ್ವೇರ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಟಿಸಿಎಸ್
ಸಮಭಾಜಕಕ್ಕಿಂತ 51.6 ಡಿಗ್ರಿಯಲ್ಲಿ ಬಾಹ್ಯಾಕಾಶ ಕೇಂದ್ರವು ಪರಿಭ್ರಮಿಸುತ್ತಿರುವಾಗ ಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ಪೋಸ್ಟ್ ವಿವರಿಸುತ್ತದೆ.
ಸಮಭಾಜಕಕ್ಕಿಂತ 51.6ಕ್ಕಿಂತ ಎತ್ತರದಲ್ಲಿ ತೆಗೆದ ಚಿತ್ರವು ಭೂಮಿಯ ವಿಸ್ಮಯಕಾರಿ ನೋಟವನ್ನು ತೋರಿಸುತ್ತಿದೆ. ಒಟ್ಟು ನಾಲ್ಕು ಚಿತ್ರ ಹಂಚಿಕೊಳ್ಳಲಾಗಿದೆ. ಫೋಟೊ ಕಂಡ ನೆಟ್ಟಿಗರು ಅಚ್ಚರಿಯಲ್ಲಿ ಪ್ರತಿಕ್ರಿಯೆ ನೀಡಿ ಖುಷಿಪಟ್ಟಿದ್ದಾರೆ.